ಪುತ್ತೂರು : ಬಂಟ್ವಾಳ ತಾಲೂಕಿನ ಅಕ್ಕ ಪಕ್ಕದ ಗ್ರಾಮಗಳಾದ ಕೆದಿಲ,ಕಡೇಶಿವಾಲಯ,ಪೆರ್ನೆ. ಈ ಗ್ರಾಮದ ಸಂಘದ (ಆರ್.ಎಸ್.ಎಸ್) ಸ್ವಯಂಸೇವಕರು ,ಹಿಂದು ಜಾಗರಣ ವೇದಿಕೆಯ ಸಕ್ರೀಯ ಕಾರ್ಯಕರ್ತರು ಜೊತೆಗೂಡಿ ಗ್ರಾಮದಲ್ಲಿ ಸೇವಾ ಕಾರ್ಯಕ್ಕಾಗಿ ಕೆದಿಲದಲ್ಲಿ ಯುವಕೇಸರಿ ಗಡಿಯಾರ,ಕಡೇಶಿವಾಲಯದಲ್ಲಿ ಯುವಶಕ್ತಿ ಕಡೇಶಿವಾಲಯ,ಪೆರ್ನೆಯಲ್ಲಿ ಯುವಸ್ಪಂದನ ಪೆರ್ನೆ ಎನ್ನುವ ಹೆಸರಿನಲ್ಲಿ ಸಂಘಟನೆ ಆರಂಭಿಸಿ ಎಲೆಮರೆಯ ಕಾಯಿಯಂತೆ ಅನೇಕ ಸೇವಾ ಕಾರ್ಯನಡೆಸುತ್ತಾ ಬಂದಿದೆ.
ಬಂಟ್ವಾಳ ತಾಲೂಕು ಹಾಗೂ ಹೊರ ತಾಲೂಕುಗಳಾದ ಪುತ್ತೂರು, ಕಡಬ ತಾಲೂಕುಗಳ ನಾಲ್ಕು ಮಕ್ಕಳು ಅನಾರೋಗ್ಯದಿಂದಿರುವುದಾಗಿ, ಅವರಿಗೆ ಚಿಕಿತ್ಸಾವೆಚ್ಚ ಬರಿಸಲು ಸಾಧ್ಯವಾಗದೆ ಕಂಗೆಟ್ಟಿರುವುದನ್ನು ಮನಗಂಡು ಈ ಸಂಘಟನೆಗಳು ಸಹಾಯಹಸ್ತವನ್ನು ಚಾಚಿದೆ ಅದಕ್ಕಾಗಿ ‘ಸೇವಾ ಯಜ್ಞ’ ಎಂಬ ಸಂಕಲ್ಪದೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಅತೀ ದೊಡ್ಡ ಹನುಮಂತನ ವೇಷ (ಅಂದಾಜು 40 KG ತೂಕದ) ಹಾಕಿ ನಾಲ್ಕು ಮಕ್ಕಳ ಚಿಕಿತ್ಸೆಗೆ ನಿಧಿ ಸಂಗ್ರಹಿಸಲು ಮುಂದಾಗಿದೆ. ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.