ಉಡುಪಿ: ಮಲ್ಪೆ ಬಂದರಿನಲ್ಲಿ ಮೀನುಗಾರರ ಬಲೆಗೆ ಬಿದ್ದಿದ್ದ ಈ ಮೀನು ಬರೋಬ್ಬರಿ 2 ಲಕ್ಷಕ್ಕೆ ಹರಾಜಾಗಿದೆ. ಈ ಮೀನು ಬರೋಬ್ಬರಿ 22 ಕೆಜಿ ತೂಗುತ್ತಿದ್ದು, 2,34,080 ರೂಪಾಯಿಗಳಿಗೆ ಮಾರಾಟವಾಗಿದೆ.

ಉಡುಪಿ ಮಲ್ಪೆ ಬಂದರಿನ ಮೀನುಗಾರರ ಬಲೆಗೆ ಸಿಕ್ಕಿದ ಗೋಳಿ ಮೀನು ಇದೀಗ ಎರಡು ಲಕ್ಷಕ್ಕೂ ಅಧಿಕ ಮೊತ್ತಕ್ಕೆ ಸೇಲ್ ಆಗಿದೆ.
ಆಳ ಸಮುದ್ರ ಮೀನುಗಾರಿಗೆ ತೆರಳಿದ್ದ ಬೋಟಿನ ಮೀನುಗಾರರ ಬಲೆಗೆ ಸಿಕ್ಕಿ ಹಾಕಿಕೊಂಡ ಲಕ್ಷ ಮೌಲ್ಯದ ಮತ್ಸ್ಯ ಇದಾಗಿದೆ. ಇದನ್ನು ಔಷಧಿಗಳಿಗೆ ಬಳಕೆ ಮಾಡಲಾಗುತ್ತಿದ್ದು, ಇದೇ ಕಾರಣಕ್ಕೆ ಇದು ದುಬಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಮಲ್ಪೆ ಬಂದರಿನಲ್ಲಿ ಈ ಮೀನು ಹರಾಜಿನಲ್ಲಿ ಮಾರಾಟವಾಗಿದೆ.

























