ಮಂಗಳೂರು: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿಗೆ ಮಂಗಳೂರು ಕಮಿಷನರ್ ಕಚೇರಿಯಲ್ಲಿ ವಿಶೇಷ ಗೌರವ ಸಿಕ್ಕಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಆಹ್ವಾನದ ಮೇರೆಗೆ ರೂಪೇಶ್ ಶೆಟ್ಟಿ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿದ್ದರು.
ಈ ವೇಳೆ ಮಂಗಳೂರು ನಗರ ಪೊಲೀಸರು, ವಿನ್ನರ್ ರೂಪೇಶ್ ಶೆಟ್ಟಿಯವರನ್ನು ಸನ್ಮಾನಿಸಿದರು. ಬಳಿಕ ಪೊಲೀಸ್ ಕಮಿಷನರ್ ಕಚೇರಿಯ ಸಿಬ್ಬಂದಿ, ಮಹಿಳಾ ಸಿಬ್ಬಂದಿ ಸೇರಿದಂತೆ ಎಲ್ಲರೂ ರೂಪೇಶ್ ಶೆಟ್ಟಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಬಿಗ್‌ಬಾಸ್ ಓಟಿಟಿ ಸೀಸನ್‌ನಲ್ಲಿ ಭಾಗವಹಿಸಿದ್ದ ರೂಪೇಶ್ ಶೆಟ್ಟಿ ಅಲ್ಲಿ ಗೆಲುವು ಸಾಧಿಸಿ ಸೀಸನ್ 9ಕ್ಕೆ ಪ್ರವೇಶ ಮಾಡಿದ್ದರು. ಅಲ್ಲಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ರೂಪೇಶ್ ಶೆಟ್ಟಿ, ಕೊನೆಗೂ ಟೈಟಲ್ ಎತ್ತಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿದ್ದ ರೂಪೇಶ್ ಶೆಟ್ಟಿ ಅಪಾರ ಜನರ ಪ್ರೀತಿ-ವಿಶ್ವಾಸ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ..



























