ವಿಟ್ಲ : ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ 20 ಅಡಿ ಅಳದ ಕಂದಕಕ್ಕೆ ಸ್ಕೂಟಿ ಮತ್ತು ಅದನ್ನು ಚಲಾಯಿಸುತಿದ್ದ ಮಹಿಳೆ ಉರುಳಿ ಬಿದ್ದ ಘಟನೆ ವಿಟ್ಲ ಸಮೀಪದ ಕಾಶಿ ಮಠ ಎಂಬಲ್ಲಿ ಎ 20 ರಂದು ನಡೆದಿದೆ. ಸ್ಕೂಟಿ ಚಲಾಯಿಸುತಿದ್ದ ಮಹಿಳೆ ಸಣ್ಣ ಪುಟ್ಟ ತರಚು ಗಾಯಗಳೊಂದಿಗೆ ಪವಾಡ ಸದೃಶ್ಯವಾಗಿ ಪಾರಾಗಿದ್ದಾರೆ.
ಉಕ್ಕುಡ ನಿವಾಸಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಚೇರಿಯಲ್ಲಿ ಉದ್ಯೋಗಿಯಾಗಿರುವ ಮೋಹಿನಿ ಸ್ಕೂಟಿ ಚಲಾಯಿಸುತಿದ್ದ ಮಹಿಳೆ. ಆಕೆಗೆ ಸಣ್ಣ ಪುಟ್ಟ ಗಾಯಗಳಗಿದ್ದೂ ಕೂಡಲೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಮಂಗಳವಾರ ಉಕ್ಕುಡ ಕಡೆಯಿಂದ ವಿಟ್ಲ ಕಡೆಗೆ ಮೋಹಿನಿಯವರು ತನ್ನ ಸ್ಕೂಟಿಯನ್ನು ಚಲಾಯಿಸಿಕೊಂಡು ಬರುತಿದ್ದಾಗ ಕಾಶಿ ಮಠ ಬಳಿಯ ತಿರುವಿನಲ್ಲಿ ಅಪಘಾತ ಸಂಭವಿಸಿದೆ . ತಿರುವಿನ ಸಮೀಪವೇ ಅಪಾಯಕಾರಿಯಾಗಿ ಕಂದಕವಿದ್ದು ಇದಕ್ಕೆ ಅವರು ಉರುಳಿ ಬಿದ್ದಿದ್ದಾರೆ . ಕೂಡಲೇ ಇದನ್ನು ಗಮನಿಸಿದ ಸ್ಥಳೀಯರು ಮಹಿಳೆಯನ್ನು ರಕ್ಷಿಸಿದ್ದಾರೆ.