ಪುತ್ತೂರು : ಬಟ್ಟೆ ಮಳಿಗೆಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಆಗಮಿಸಿದ ಮಹಿಳೆಯೊಬ್ಬರು ಸಿಬ್ಬಂದಿಗಳ ಕಣ್ಣು ತಪ್ಪಿಸಿದ ಬಟ್ಟೆ ಕಳವು ಮಾಡಿರುವ ಘಟನೆ ಪುತ್ತೂರಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮಳಿಗೆಯಲ್ಲಿ ನಡೆದಿದೆ.

ಮಹಿಳೆಯ ಬಟ್ಟೆ ಕಳವು ಕೃತ್ಯ ಹಾಗೂ ಕಳವು ನಡೆಸಿ ಹೊರ ಹೋಗುವ ದೃಶ್ಯ ಮಳಿಗೆಯ ಒಳಗಡೆ ಹಾಗೂ ಹೊರಗಡೆ ಹಾಕಲಾಗಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದೆ..

























