ಲಕ್ನೋ: ಮೊದಲ ಪತಿ ತೀರಿಕೊಂಡ ನಂತರ 2ನೇ ಮದುವೆಯಾಗಿದ್ದ 28 ವರ್ಷದ ಸೊಸೆಯನ್ನ 70 ವರ್ಷದ ಸ್ವಂತ ಮಾವನೇ ಲವ್ ಮಾಡಿ ಮದುವೆಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಗೋರಖ್‌ಪುರದ ಛಾಪಿಯಾ ಉಮ್ರಾವ್ ಗ್ರಾಮದ 70 ವರ್ಷದ ಕೈಲಾಶ್ ಯಾದವ್ ತನ್ನ 28 ವರ್ಷದ ಸೊಸೆ ಪೂಜಾಳನ್ನ ಮದುವೆಯಾಗಿದ್ದಾರೆ. ಬದಲ್‌ಗಂಜ್ ಕೊಟ್ವಾಲಿ ಪ್ರದೇಶದ ಛಾಪಿಯಾ ಉಮ್ರಾವ್ ಗ್ರಾಮದಲ್ಲಿ ಮದುವೆ ನಡೆದಿದೆ.
ಕೈಲಾಶ್ ಯಾದವ್ ಬದಲ್‌ಗಂಜ್ ಪೊಲೀಸ್ ಠಾಣೆಯಲ್ಲಿ ವಾಚ್‌ಮ್ಯಾನ್ ಆಗಿ ಕೆಲಸ ಮಾಡ್ತಿದ್ದಾರೆ. ಕೈಲಾಶ್ ಪತ್ನಿ 12 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಕೈಲಾಶ್ ಅವರ ನಾಲ್ವರು ಮಕ್ಕಳಲ್ಲಿ ಮೂರನೇ ಮಗ, ಪೂಜಾಳನ್ನ ವಿವಾಹವಾಗಿದ್ದರು. ಆದರೆ ಪೂಜಾ ಪತಿಯೂ ಕೆಲ ವರ್ಷದ ಹಿಂದೆ ಸಾವನ್ನಪ್ಪಿದ್ದರು.
ಇದಾದ ನಂತರ ಪೂಜಾ ಬೇರೆ ವ್ಯಕ್ತಿಯನ್ನು ಮದುವೆಯಾಗಿದ್ದರು. ಆದರೆ ಆಕೆಗೆ ಆತ ಇಷ್ಟವಾಗಿರಲಿಲ್ಲ. ನಂತರ ಪೂಜಾ ಅಲ್ಲಿಂದ ಹೊರಟು ಗಂಡನ ಮನೆಗೆ ಬಂದಿದ್ದಳು. ಈ ನಡುವೆ ಮಾವನಿಗೆ ಸೊಸೆಯ ಮೇಲೆ ಪ್ರೀತಿ ಶುರುವಾಗಿದ್ದು, ಪರಸ್ಪರ ಒಪ್ಪಿ ಮದುವೆಯಾಗಿದ್ದಾರೆ. ಸದ್ಯ ಮಾವನನ್ನೇ ಮದುವೆಯಾದ ಸೊಸೆ ಸಪ್ತಪದಿ ತುಳಿದು ಗಂಡನ ಮನೆಯಲ್ಲೇ ವಾಸವಾಗಿದ್ದಾಳೆ.
ಈ ಜೋಡಿಯ ಫೋಟೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ..


























