ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ, ನೀರಿನ ತೆರಿಗೆ ಮತ್ತು ಉದ್ಯಮ ಪರವಾನಿಗೆ ಹಾಗೂ ಇತರ ಸೇವೆಗಳ ತೆರಿಗೆಗಳನ್ನು ಪಾವತಿಸಲು ನಾಗರಿಕರು ನಗರಸಭೆಗೆ ಬಾರದೆ ಆನ್‌ಲೈನ್ ಮೂಲಕ ಪಾವತಿಸಲು ಹೊಸ ತಂತ್ರಾಂಶ ಸೌಲಭ್ಯ ಒದಗಿಸಲಾಗಿದೆ.
ಪುತ್ತೂರು ನಗರಸಭೆ ವೆಬ್‌ಸೈಟ್ (www.putturcity.mrc.gov.in) ನಲ್ಲಿ ನಾಗರಿಕ ಸೇವೆಗಳು / ಅಪ್ಲಿಕೇಶನ್‌ಗಳು ಶೀರ್ಷಿಕೆಯಲ್ಲಿ ಆನ್‌ಲೈನ್ ಮೂಲಕ ಪಾವತಿಸಲು ತಂತ್ರಾಂಶದಲ್ಲಿ ಸೌಲಭ್ಯವನ್ನು ಒದಗಿಸಲಾಗಿದೆ. ಸಾರ್ವಜನಿಕರು ಅನಗತ್ಯವಾಗಿ ನಗರಸಭೆಗೆ ಬಾರದೆ ಆನ್‌ಲೈನ್ ನೆಟ್ ಬ್ಯಾಂಕಿಂಗ್ ಪೇಮೆಂಟ್ ಮೂಲಕ ಪಾವತಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಪಾವತಿಸಿದ ಮೊತ್ತವು ಪಾವತಿಸಬೇಕಾದ ಮೊತ್ತಕ್ಕಿಂತ ಕಡಿಮೆ ಕಂಡು ಬಂದಲ್ಲಿ ನಗರಸಭೆಯಿಂದ ಬಾಕಿ ಮೊತ್ತವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ತೆರಿಗಗಳ ಹೆಚ್ಚಿನ ವಿವರಗಳಿಗೆ ಪುತ್ತೂರು ನಗರಸಭೆಯ ಕಂದಾಯ ಅಥವಾ ಆರೋಗ್ಯ ಅಥವಾ ನೀರಿನ ವಿಭಾಗವನ್ನು ಸಂಪರ್ಕಿಸಲು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮತ್ತು ಪೌರಾಯುಕ್ತೆ ರೂಪಾ ಶೆಟ್ಟಿ ತಿಳಿಸಿದ್ದಾರೆ. ಕಚೇರಿ ದೂರವಾಣಿ ಸಂಖ್ಯೆ 08251-230251 ಕ್ಕೆ ಕರೆ ಮಾಡುವಂತೆ ಅವರು ತಿಳಿಸಿದ್ದಾರೆ.