ಬೆಳ್ತಂಗಡಿ: ನಾಲ್ಕು ದಿನಗಳ ಹಿಂದೆ ನಡೆದ ಟಿಪ್ಪರ್ ಮತ್ತು ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಸೌತಡ್ಕದಲ್ಲಿ ನಡೆದಿದೆ.
ಕೊಕ್ಕಡ ಸೌತಡ್ಕ ನಿವಾಸಿ ಸಿರಾಜ್ ಮೃತ ದುರ್ದೈವಿ.
ಟಿಪ್ಪರ್ ಮತ್ತು ಸಿರಾಜ್ ಸಂಚರಿಸುತ್ತಿದ್ದ ಬೈಕ್ ನಡುವೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಕೆಂಪಕೋಡಿ ಎಂಬಲ್ಲಿ ಅಪಘಾತವಾಗಿತ್ತು. ಪರಿಣಾಮ ಸಿರಾಜ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಪಘಾತದ ತೀವ್ರತೆಗೆ ಪ್ರಜ್ಞಾಹೀನರಾಗಿದ್ದ ಸಿರಾಜ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಿರಾಜ್ ಎಸ್‌ಕೆಎಸ್‌ಎಸ್‌ಎಫ್ ಕೊಕ್ಕಡ ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು..