ಪುತ್ತೂರು: ಕಾರೊಂದು ಪಲ್ಟಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸಂಟ್ಯಾರ್ ನಲ್ಲಿ ನಡೆದಿದೆ.
ಪುತ್ತೂರಿನಿಂದ ಬೆಟ್ಟಂಪಾಡಿ ಕಡೆಗೆ ತೆರಳುವ ಕಾರು ಸಂಟ್ಯಾರ್ ಸಮೀಪ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಯ ತೋಟಕ್ಕೆ ಪಲ್ಟಿಯಾಗಿದ್ದು, ಗಂಭೀರ ಗಾಯಗೊಂಡ ಮುರಳಿ ಭಟ್ ರವರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತರನ್ನು ಬಿಜೆಪಿ ಬೆಂಬಲಿತ ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮುರಳಿಕೃಷ್ಣ ಭಟ್ ಎಂದು ಗುರುತಿಸಲಾಗಿದೆ..
ಸಂಟ್ಯಾರು ಬೆಟ್ಟಂಪಾಡಿ ರಸ್ತೆಯ ಸಂಟ್ಯಾರು ಸಮೀಪದ ಬಳಕ್ಕ ಎಂಬಲ್ಲಿ ಕಾರು ಅಪಘಾತ ಸಂಭವಿಸಿದ್ದು , ಕಾರು ಎರಡು ವಿದ್ಯುತ್ ಕಂಬಕ್ಕೆ ಗುದ್ದಿ 50 ಅಡಿ ಆಳದ ತೋಟಕ್ಕೆ ಬಿದ್ದಿದೆ ಎಂದು ವರದಿಯಾಗಿದೆ.
ಕಾರಲ್ಲಿದ್ದವರನ್ನು ಬೆಟ್ಟಂಪಾಡಿಯ ದಿಲೀಪ್ ಕುಮಾರ್ ರಾವ್ , ಶಶಿಕುಮಾರ್ , ನವನೀತ್ ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮುರಳಿಧರ್ ಭಟ್ ಎಂದು ಸ್ಥಳೀಯರು ಗುರುತಿಸಿದ್ದಾರೆ.