ವಿಟ್ಲ: ಅಡ್ಯನಡ್ಕದ ವಾರಣಾಶಿ ಅಭಿವೃದ್ಧಿ ಮತ್ತು ಸಂಶೋಧನಾ ಪ್ರತಿಷ್ಠಾನಕ್ಕೆ ಸ್ಯಾಂಡಲ್ ವುಡ್ ನ ಖ್ಯಾತ ನಟ ವಿನಯ್ ರಾಜ್ ಕುಮಾರ್ ರವರು ಭೇಟಿ ನೀಡಿದರು.
ವಿನಯ್ ರಾಜ್ ಕುಮಾರ್ ರವರು ಸಾವಯವ ಸುಸ್ಥಿರ ಕೃಷಿ ಕಲಿಯುವುದಕ್ಕಾಗಿ ವಾರಣಾಶಿ ಅಭಿವೃದ್ಧಿ ಮತ್ತು ಸಂಶೋಧನಾ ಪ್ರತಿಷ್ಠಾನಕ್ಕೆ ಆಗಮಿಸಿದ್ದಾರೆ.
ವಾರಣಾಶಿ ಫಾರ್ಮ್ ನ ತೋಟವನ್ನು ವೀಕ್ಷಿಸಿದ ಅವರು ಅಲ್ಲಿ ಬೆಳೆಯುವಂತಹ ಮಿಶ್ರ ಬೆಳೆಯಾದ ತೆಂಗು, ಅಡಿಕೆ, ಕೊಕ್ಕೊ, ಜಾಯಿಕಾಯಿ, ಬಾಳೆ, ಕರಿಮೆಣಸು ಗಳನ್ನು ನೋಡಿ ಮಣ್ಣಿನ ಫಲವತ್ತತೆಯನ್ನು ವೃದ್ಧಿಗೊಳಿಸುವಂತಹ ಜೀವಾಣು ಗೊಬ್ಬರಗಳನ್ನು ಹೇಗೆ ತಯಾರಿಸುವುದು ಎಂಬ ಬಗ್ಗೆ ವಾರಣಾಶಿ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದಲ್ಲಿ ತಿಳಿದುಕೊಂಡರು. ಹಾಗೆಯೇ ಅದನ್ನು ಹೇಗೆ ಉಪಯೋಗಿಸುವುದು ಎಂಬ ಬಗ್ಗೆಯೂ ಅವರು ಕಲಿತುಕೊಂಡರು.
ನದಿಯಲ್ಲಿ ಸ್ಟ್ಯಾಂಡ್ ಅಪ್ ಪ್ಯಾರಲ್ ಕ್ರೀಡೆಯನ್ನು ಕಲಿತುಕೊಂಡರು. ಎರಡು ದಿವಸಗಳ ಕಾಲ ವಾರಣಾಸಿ ಫಾರ್ಮ್ಸ್ ನ ಹೋಮ್ ಸ್ಟೇ ಯಲ್ಲಿ ಉಳಿದುಕೊಂಡಿದ್ದು, ಅಲ್ಲಿಯ ಸಾವಯವ ಆಹಾರವನ್ನು ಸೇವಿಸಿದರು. ವಾರಣಾಶಿ ಅಭಿವೃದ್ಧಿ ಮತ್ತು ಸಂಶೋಧನಾ ಪ್ರತಿಷ್ಠಾನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.