ಪುತ್ತೂರು: ಬಾರ್ಯ ಗ್ರಾಮ ಪಂಚಾಯತ್ ನಲ್ಲಿ ವಿಕಲಚೇತನರ ಸಮನ್ವಯಯ ವಿಶೇಷ ಗ್ರಾಮ ಸಭೆ ಬುಧವಾರದಂದು ನಡೆಯಿತು.

ಅಭಿವೃದ್ಧಿ ಅಧಿಕಾರಿ ಸುಶೀಲ ಮೇಡಂ ಅಧಕ್ಷರು ಉಷಾಕಿರಣ ಉಪಾಧ್ಯಕ್ಷರು ಪಿ ಕೆ. ಉಸ್ಮಾನ್ ಸರ್ವ ಸದಸ್ಯರು ಬೆಳ್ತಂಗಡಿ ತಾಲೂಕು ವಿವಿಧೋದ್ದೇಶ ಕಾರ್ಯಕರ್ತರು ಜಾನ್ ಬ್ಯಾಪಿಸ್ಟ್ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು, ಗ್ರಾಮೀಣ ಪುರ್ನವಸತಿ ಕಾರ್ಯಕರ್ತರು ರಾಧಿಕಾ ಇಳಂತಿಲ ಸುಲೋಚನ ಕುವೆಟ್ಟು ಸೌಮ್ಯ ತಣ್ಣಿರು ಪಂಥ ಕಾರ್ಯಕರ್ತರು ಭಾಗವಹಿಸಿದರು.
ಅಭಿವೃಧಿ ಅಧಿಕಾರಿ ಸುಶೀಲ ಮೇಡಂ ಇವರು ಸ್ವಾಗತಿಸಿದರು. ಬಾರ್ಯ ಗ್ರಾಮ ಪಂಚಾಯಿತಿನ ವಿಆರ್ ಡಬ್ಲ್ಯೂ ಬಾರ್ಯ ಗ್ರಾಮ ವ್ಯಾಪ್ತಿಯಲ್ಲಿ ವಿಕಲಚೇತನರ ವರಧಿ ವಾಚನ ಮಾಡಿದರು ಬೆಳ್ತಂಗಡಿ ತಾಲೂಕು ವಿವಿದೊದ್ದೇಶ ಕಾರ್ಯಕರ್ತರು ವಿಕಲಚೇತನರಿಗೆಸಿಗುವ ಸೌಲಭ್ಯ ದ ಬಗ್ಗೆ ಮತ್ತು ಎಂಡೋಸಲ್ಪಾನ್ ಪೀಡಿತರ ಸಿಗುವ ಸೌಲಭ್ಯ ದ ಬಗ್ಗೆ ಮಾಹಿತಿ ನೀಡಿ ಚರ್ಚಿಸಿದರು.

ಬಾರ್ಯ ಗ್ರಾಮ ಪಂಚಾಯಿತಿ ಅದ್ಯಕ್ಷರು ವಿಶೇಷಚೇತನರಿಗೆ ಹಿತವಚನವನ್ನು ನೀಡಿದರು. ಧನ್ಯವಾದ ಬಾರ್ಯ ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿ ಸುಶೀಲ ಮೇಡಂ ನೀಡಿದರು. ವಿಕಲ ಚೇತನರ ಸಮನ್ವಯ ಗ್ರಾಮ ಸಭೆ ಮುಕ್ತಾಯಗೊಳಿಸಿದರು.