ಆಲ್ ಇಂಡಿಯಾ ಹೇರ್ ಅಂಡ್ ಬ್ಯೂಟಿ ಅಸೋಸಿಯೇಶನ್ ಮಂಗಳೂರು ಆರ್‌ಸಿಒ ಪ್ರೊಫೆಷನಲ್, ಒಲಿವಿಯಾ ಮತ್ತು ಸಿವಿ ಪ್ರೊಫೆಷನಲ್ ಸಹಯೋಗದಲ್ಲಿ ವಧುವಿನ ಮೇಕಪ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಬೆಂದೂರ್ವೆಲ್ ನ ಮಾಯಾ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಮಂಗಳೂರು, ಕಾಸರಗೋಡು, ಉಡುಪಿ, ಮಡಿಕೇರಿ, ಕಾರವಾರದ 45ಕ್ಕೂ ಹೆಚ್ಚು ಮೇಕಪ್ ಕಲಾವಿದರು ಭಾಗವಹಿಸಿದ್ದರು.

2023ರ ವಧುವಿನ ಮೇಕಪ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸ್ವಾತಿ ಗಡಿಯಾರ್ ರವರು ಪಡೆದುಕೊಂಡರು.

ಇವರು ಯುವ ಪ್ರತಿಭಾವಂತ ಪ್ರಮಾಣೀಕೃತ ಮೇಕಪ್ ಕಲಾವಿದೆ ಮತ್ತು “ಫೈನ್ ಟಚ್ ಗ್ಲಾಮ್ ಸ್ಟುಡಿಯೋ” ಅನಂತೇಶ್ ಕಾಂಪ್ಲೆಕ್ಸ್ ಕಾರ್ಸ್ಟ್ರೀಟ್ ಮಂಗಳೂರು ಇದರ ಮಾಲೀಕರಾಗಿದ್ದಾರೆ.


