ಬೆಂಗಳೂರು: ರಾಜ್ಯ ಸರ್ಕಾರದಿಂದ ಬೆಂಗಳೂರಿನ ಕೆ.ಆರ್ ಪುರಂ ಗ್ರೇಡ್-2 ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು 23-11-2022ರಂದು ಅಮಾನತುಗೊಳಿಸಿ ಆದೇಶಿಸಿತ್ತು.
ಆದರೇ ಕೆಎಟಿಯಿಂದ ತಮ್ಮ ಅಮಾನತಿಗೆ ತಡೆಯಾಜ್ಞೆ ತಂದ ಕಾರಣ, ಆದೇಶ ವಾಪಾಸ್ ಪಡೆದು, ಅದೇ ಸ್ಥಳದಲ್ಲಿ ಮುಂದುವರೆಸಿ ಇಂದು ಆದೇಶ ಹೊರಡಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ದಿನಾಂಕ 23-11-2022ರಂದು ತಹಶೀಲ್ದಾರ್ ಗ್ರೇಡ್-2 ಆಗಿದ್ದಂತ ಅಜಿತ್ ಕುಮಾರ್ ರೈ ಅವರನ್ನು, ತಹಶೀಲ್ದಾರ್ ಗ್ರೇಡ್-1, ಬೆಂಗಳೂರು ಪೂರ್ವ ತಾಲೂಕು (ಕೆಆರ್ ಪುರಂ) ಹುದ್ದೆಯಿಂದ ಅಮಾನತ್ತುಗೊಳಿಸಲಾಗಿತ್ತು. ಇವರು ದಿನಾಂಕ 23-11-2022ರಂದು ತಮ್ಮ ಅಮಾನತು ಆದೇಶವನ್ನು ಕೆಎಟಿಯಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ದಿನಾಂಕ 30-11-2022ರ ಆದೇಶದಲ್ಲಿ ಅಮಾನತು ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಈ ಹಿನ್ನಲೆಯಲ್ಲಿ ನ್ಯಾಯಾಲಯ ನೀಡಿರುವಂತ ನಿರ್ದೇಶನದಂತೆ ಬೆಂಗಳೂರು ಪೂರ್ವ ತಾಲೂಕು ಕೆ ಆರ್ ಪುಂರನ ತಹಶೀಲ್ದಾರ್ ಗ್ರೇಡ್-1 ಹುದ್ದೆಗೆ ನಿಯುಕ್ತಿಗೊಳಿಸಲಾಗಿದೆ ಎಂದಿದ್ದಾರೆ.

ಈ ಹುದ್ದೆಯಲ್ಲಿದ್ದಂತ ಅನಿಲ್ ಎಂ ಅವರನ್ನು ತಹಶೀಲ್ದಾರ್, ಬಿಬಿಎಂಪಿ ಇಲ್ಲಿ ಖಾಲಿ ಇದ್ದಂತ ಹುದ್ದೆಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ವರ್ಗಾವಣೆಗೊಳಿಸಿ ಆದೇಶಿಸಿರೋದಾಗಿ ಪ್ರಕಟಣೆ ಹೊರಡಿಸಿದ್ದಾರೆ..