ಬಂಟ್ವಾಳ: ಯುವಕನೋರ್ವನಿಗೆ ಚೂರಿಯಿಂದ ಇರಿದ ಘಟನೆ ಫೆ.18 ರಂದು ಮಧ್ಯಾಹ್ನ ಪಾಣೆಮಂಗಳೂರಿನಲ್ಲಿ ನಡೆದಿದೆ.
ಪಾಣೆಮಂಗಳೂರು ನೆಹರುನಗರ ನಿವಾಸಿ ಸುಲೈಮಾನ್ ಎಂಬವನಿಗೆ ಆತನ ಸ್ನೇಹಿತ ನಿಸಾರ್ ಚೂರಿದು ಇರಿದು ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ನಿಸಾರ್ ಕೂಡ ನೆಹರು ನಗರನಿವಾಸಿಯಾಗಿದ್ದು, ಇಬ್ಬರು ಗಾಂಜಾ ವ್ಯಸನಿಗಳಾಗಿದ್ದರು ಎನ್ನಲಾಗಿದೆ.
ಇಂದು ಮಧ್ಯಾಹ್ನ ಇವರಿಬ್ಬರು ನೆಹರುನಗರದ ಬಳಿ ಬಂದಿದ್ದು , ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದು ನಿಶಾರ್, ಸುಲೈಮಾನ್ ಗೆ ಚೂರಿಯಿಂದ ಹೊಟ್ಟೆಯ ಭಾಗಕ್ಕೆ ತಿವಿದಿದ್ದಾನೆ ಎನ್ನಲಾಗಿದೆ.
ಗಾಯಗೊಂಡ ಸುಲೈಮಾನ್ ನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಭೇಟಿ ನೀಡಿದ್ದಾರೆ.
ಆರೋಪಿ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ..