ಮಾಣಿ: ಬಾನೊಟ್ಟು ಶ್ರೀ ಉಮಾಮಹೇಶ್ವರ ಕ್ಷೇತ್ರದ ಜೀರ್ಣೋದ್ಧಾರ ಕುರಿತು ಧರ್ಮಜಾಗೃತಿ ಅಭಿಯಾನದ ಶಿವರಾತ್ರಿ ವಿಶೇಷ ಭಜನಾ ಕಾರ್ಯಕ್ರಮ ಇಂದು ಜರುಗಿತು.
ಮಾಣಿ ಸುತ್ತಮುತ್ತಲಿನ ಕುಣಿತ ಭಜನಾ ತಂಡಗಳು ಭಜನೆಯ ಮುಖಾಂತರ ಭಜನಾ ಸಂಕೀರ್ತನೆಯ ಮೂಲಕ ಜೀರ್ಣೋದ್ಧಾರಗೊಳ್ಳಲಿರುವ ಶಿವ ಸಾನಿಧ್ಯಕ್ಕೆ ತೆರಳಿ ವಿಶೇಷ ಭಜನೆ ನಡೆಸಲಾಯಿತು ಹಾಗೂ ಶ್ರೀಘ್ರವಾಗಿ ಕ್ಷೇತ್ರದ ಜೀರ್ಣೋದ್ಧಾರ ಆಗುವಂತೆ ಪ್ರಾರ್ಥನೆ ಸಲ್ಲಿಸಲಾಯಿತು.
ಶ್ರೀ ವಿನಾಯಕ, ಶ್ರೀ ದೇವಿ ಭಜನ ಮಂದಿರ ಬರಿಮಾರು, ದುರ್ಗಾಪರಮೇಶ್ವರಿ ಭಜನಾ ಮಂಡಳಿ ನೇರಳಕಟ್ಟೆ,ಶ್ರೀ ಕಾನಲ್ತಾಯ ಮಹಾಕಾಳಿ ಭಜನಾ ಮಂಡಳಿ ಕಲ್ಲೇಟಿ, ಶ್ರೀ ದೇವಿ ಭಜನಾ ಮಂಡಳಿ ಪೆರಾಜೆ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಪೆರಾಜೆ ಮತ್ತು ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯ ಸದಸ್ಯರು ಹಾಗೂ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಮಾಣಿಗುತ್ತು ಸಚಿನ್ ರೈ, ಸದಾಶಿವ ಆಚಾರ್ಯ, ನಾರಾಯಣ ರೈ ಕೊಡಾಜೆ, ನಾರಾಯಣ ಆಳ್ವ ಕೊಡಾಜೆ,
ಮಾಣಿ ಗ್ರಾ.ಪಂ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ, ಪಂಚಾಯತ್ ಸದಸ್ಯರಾದ ತೋಟ ನಾರಾಯಣ ಶೆಟ್ಟಿ, ಗಿರಿಯಪ್ಪ ಪೂಜಾರಿ, ದಿನಕರ ನಾಯಕ್ ನೇರಳಕಟ್ಟೆ, ರಾಮಕೃಷ್ಣ ಆಳ್ವ ಕೊಡಾಜೆ, ವೆಂಕಟರಮಣ ಪೈ, ನರಸಿಂಹ ಶೆಟ್ಟಿ, ಭರತ್ ಪೂಜಾರಿ ಕೋಡಿ, ನಿತಿನ್ ಸಾಲ್ಯಾನ್, ವಿಶ್ವಾನಾಥ ಕುಲಾಲ್, ಗಿರೀಶ್ ನಾಯ್ಕ್, ತೋಟ ಬಾಬು ಶೆಟ್ಟಿ, ಹರೀಶ್ ಮಾಣಿ, ಜನಾರ್ಧನ ಪೂಜಾರಿ, ಚಂದ್ರಹಾಸ ಕಲ್ಲೆಟ್ಟಿ, ಕುಮಾರ್ ಪಿ.ಎಸ್., ನಿರಂಜನ ಭಟ್,ರಘುಪತಿ ನಾಯಕ್ ಮುರುವ ಮೊದಲಾದವರು ಸೇರಿದಂತೆ ಹಲವು ಸಂಖ್ಯೆಯಲ್ಲಿ ಗ್ರಾಮಸ್ಥರು ಊರ-ಪರವೂರ ಭಕ್ತರು ಉಪಸ್ಥಿತರಿದ್ದರು.
ಶಿವಭಕ್ತರು ಮಾಣಿ ಸಂಘಟನೆ ಈ ಶಿವರಾತ್ರಿ ಕಾರ್ಯಕ್ರಮ ಆಯೋಜನೆ ಮಾಡಿತ್ತು..