ಪುತ್ತೂರು: ಗ್ರಾಮಾಂತರ ಮಂಡಲದ ಪುಣಚ ಮಹಾಶಕ್ತಿಕೇಂದ್ರದ ಸಭೆಯು ಕಂಬಳಬೆಟ್ಟು ಧರ್ಮನಗರದಲ್ಲಿ ನಡೆಯಿತು.

ಸಭೆಯಲ್ಲಿ ರಾಜ್ಯ ಬಿಜೆಪಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿಯಾಗಿ ನಿಯುಕ್ತಿಯಾದ ರಾಜೇಶ್ ಕಾವೇರಿಯವರು ಚುನಾವಣಾ ಪೂರ್ವ ತಯಾರಿ ಮತ್ತು ಪಕ್ಷದ ಸಂಘಟನಾತ್ಮಕ ವಿಚಾರದ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಕೃಷ್ಣ ಆಳ್ವ,ಮಂಡಲದ ಪ್ರ.ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಪುಣಚ ಮಹಾಶಕ್ತೀ ಕೇಂದ್ರ ಅಧ್ಯಕ್ಷರಾದ ಹರಿಪ್ರಸಾದ್ ಯಾದವ್ ಹಾಗೂ ಶಕ್ತಿಕೇಂದ್ರ ಸಂಚಾಲಕರು, ವಿವಿಧ ಪ್ರಕೋಷ್ಠ ಸಂಚಾಲಕರು, ಜಿಲ್ಲಾ ಸಮಿತಿ,ಮಂಡಲ ಸಮಿತಿ, ಪಂಚಾಯತ್ ಅಧ್ಯಕ್ಷರು ಉಪಸ್ಥಿತರಿದ್ದರು.