ಚೀನಾ ಯಾವಾಗಲೂ ಮಾನವ ಆಸಕ್ತಿದಾಯಕ ವಸ್ತುಗಳನ್ನ ಸಂಶೋಧನೆ ಮಾಡೋದರಲ್ಲಿ ಒಂದು ಹೆಜ್ಜೆ ಮುಂದೆಯೇ ಇದೆ. ಮೊಬೈಲ್, ಆಟಿಕೆಗಳು, ಎಲೆಕ್ಟ್ರಾನಿಕ್ ಐಟಂಗಳು, ಗೇಮ್ ಅಪ್ಲಿಕೇಶನ್ಸ್ ಸೇರಿದಂತೆ ಅನೇಕ ಅಟ್ರ್ಯಾಕ್ಟಿವ್ ಆಗಿರುವ ವಸ್ತುಗಳನ್ನು ಜನರ ಮುಂದೆ ಇಡುತ್ತದೆ. ಮಾತ್ರವಲ್ಲ ಅವುಗಳನ್ನು ಮಾರುಕಟ್ಟೆಗೆ ತಂದು ಬಹು ಬೇಗ ಸಕ್ಸಸ್ ಆಗುತ್ತದೆ. ಮೊನ್ನೆಯಷ್ಟೇ ಲಕ್ಷ ಲಕ್ಷ ಲೀಟರ್ ಹಾಲು ಕೊಡುವ ಹಸುವೊಂದನ್ನು ಅಭಿವೃದ್ಧಿ ಪಡಿಸಿರುವ ಬಗ್ಗೆ ಸುದ್ದಿಯಾಗಿತ್ತು. ಆದರೆ ಈ ಸುದ್ದಿ ಸ್ವಲ್ಪ ಭಿನ್ನವಾಗಿದೆ.
ಹೌದು.. ಡ್ರಾಗನ್ ರಾಷ್ಟ್ರದಲ್ಲಿ ಕಿಸ್ ಮಾಡುವ ಡಿವೈಸ್ ಕಂಡು ಹಿಡಿಯಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ಇದನ್ನು ನೋಡಿದವರು ಒಂದು ಕ್ಷಣ ದಂಗಾಗಿ ಹೋಗ್ತಿದ್ದಾರೆ. ಚೀನಾದ ವಿಶ್ವವಿದ್ಯಾಲಯವೊಂದು ಈ ಕಿಸ್ ಮಾಡುವ ಸಾಧನ ಸಂಶೋಧನೆ ಮಾಡಿದೆ.
ಪತಿ-ಪತ್ನಿ ದೂರವಿದ್ದಾಗ ನಿಜವಾಗಲೂ ಪರಸ್ಪರ ಕಿಸ್ ಮಾಡುವ ಹಾಗೂ ಸಂಗಾತಿಯಿಂದಲೇ ಸಿಗುವಂತಹ ಅನುಭವ ಕೊಡುವ ಡಿವೈಸ್ ಇದಾಗಿದೆ. ಈ ಸಾಧನವನ್ನು ಈಗಾಗಲೇ ಚಾಂಗೌಝ್ ವೊಕೇಶನಲ್ ಇನ್ ಸ್ಟಿಟ್ಯೂಟ್ ಆಫ್ ಮೆಕಾಟ್ರಾನಿಕ್ ಟೆಕ್ನಾಲಜಿ ಕಂಪನಿಯು, ವಿವಿಯಿಂದ ಪೇಟೆಂಟ್ ಪಡೆದುಕೊಂಡಿದೆ.
ಈ ಕಿಸ್ ಸಾಧನ ಸಿಲಿಕೊನ್ ಲಿಪ್ಸ್ ಹೊಂದಿದ್ದು, ಸಂವೇದನೆ ಹಾಗೂ ಪ್ರಚೋದಕಗಳನ್ನ ನೀಡುವಂತಹ ಸಾಧನ ಅಳವಡಿಸಲಾಗಿದೆ. ಇದನ್ನು ಬಳಕೆ ಮಾಡುವರಿಗೆ ತುಟಿಗಳ ಒತ್ತಡ, ತಾಪಮಾನದ ಅನುಭವ ಆಗೋದ್ರಿಂದ ರಿಯಲ್ ಆಗಿ ಕಿಸ್ ಮಾಡ್ತಿರುವ ಫೀಲ್ ಕೊಡುತ್ತಂತೆ. ಮಾತ್ರವಲ್ಲ, ನ್ಯಾಚುರಲ್ ಆಗಿ ಕಿಸ್ ಮಾಡುವಾಗ ಬರುವ ಸೌಂಡಿನಂತೆಯೂ ಮುದ ನೀಡುತ್ತಂತೆ ಈ ಡಿವೈಸ್.
ಮುತ್ತು ಕೊಡೋದು ಹೇಗೆ..!??
ಇದನ್ನು ಬಳಕೆ ಮಾಡುವವರು ಆ್ಯಪ್ ಒಂದನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಫೋನ್ ಚಾರ್ಜ್ ಮಾಡುವ ಪೋರ್ಟ್‌ಗೆ ಕಿಸ್ ಸಾಧನವನ್ನು ಪ್ಲಗ್ ಮಾಡಬೇಕಾಗುತ್ತದೆ. ನಂತರ ಇನ್ನೊಂದು ಮೊಬೈಲ್ ಮೂಲಕ ಅವರು ಕೂಡ ಆ್ಯಪ್ ಆನ್ ವಿಡಿಯೋ ಕಾಲ್ ಮೂಲಕ ಕಿಸ್ ಮಾಡಬಹುದಂತೆ.
ಕಿಸ್ ಸಾಧನವನ್ನು ರೀಸರ್ಚ್ ಮಾಡಿರುವ ಜಿಯಾಂಗ್ ರೊಂಗ್ಲಿ ಅವರು ಮಾತನಾಡಿ, ನಾನು ಕೆಲಸದ ನಿಮಿತ್ತ ನನ್ನ ಹುಡುಗಿಯಿಂದ ದೂರವಿದ್ದೆ. ಈ ವೇಳೆ ಇಬ್ಬರು ಮೀಟ್ ಆಗಲು ಆಗುತ್ತಿರಲಿಲ್ಲ. ಇದೇ ಈ ಕಿಸ್ ಡಿವೈಸ್ ರೀಸರ್ಚ್ ಮಾಡುವಂತೆ ಮಾಡಿತು ಎಂದಿದ್ದಾರೆ. ಒಟ್ಟಾರೆ, ನೀವು ನಿಮ್ಮ ಸಂಗಾತಿಯನ್ನು ತುಂಬಾ ದಿನಗಳಿಂದ ಮಿಸ್ ಮಾಡಿಕೊಳ್ಳುತ್ತಿದ್ದರೆ ಒಮ್ಮೆ ಯೋಚಿಸಿ.. ಎಲ್ಲೋ ಇರುವ ನಿಮ್ಮ ಸಂಗಾತಿಯೊಂದಿಗೆ ಲಿಪ್ ಲಾಕ್ ಮಾಡಿ, ಮುತ್ತಿನ ಸುಖವನ್ನು ಪಡೆಯಬಹುದು..




























