ಪುತ್ತೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಎಸ್.ಡಿ.ಪಿ.ಐ ಪಕ್ಷ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬೆಂಗಳೂರಿನಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಎಮ್ ಕೆ ಫೈಜಿ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, 9 ಮಂದಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದಾರೆ.
ಪುತ್ತೂರಿನಲ್ಲಿ ಶಾಫಿ ಬೆಳ್ಳಾರೆ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ರಾಯಚೂರಿನಿಂದ ಸಹೀದ್ ಇಸಾಕ್ ಉಸೇನ್, ತೇರದಾಳದಿಂದ ಯಮನಪ್ಪ ಗುಣದಾಳ್, ಮೂಡಿಗೆರೆಯಿಂದ
ಅಂಗಡಿ ಚಂದು, ಬಿಜಾಪುರ ನಗರದಿಂದ ಅತಾವುಳ್ಳ ದ್ರಾಕ್ಷಿ, ಮಂಗಳೂರು ಉಳ್ಳಾಲದಿಂದ ರಿಯಾಝ್ ಫರಂಗಿಪೇಟೆ, ಕಲಬುರ್ಗಿ ಉತ್ತರದಿಂದ ರಹೀಮ್ ಪಟೇಲ್ ಮತ್ತು ಹುಬ್ಬಳ್ಳಿ ಪೂರ್ವದಿಂದ ಡಾ. ವಿಜಯ್ ಎಮ್. ಗುಂದ್ರಾಲ್ ಹೆಸರುಗಳನ್ನು ಘೋಷಿಸಲಾಗಿದೆ.
ಶಾಫಿ ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಯಾಗಿದ್ದು, ಆತ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಈಗಾಗಲೇ ವಿರೋಧ ವ್ಯಕ್ತವಾಗುತ್ತಿದೆ. ಈ ವಿಚಾರ ಮುಂದಿನ ದಿನಗಳಲ್ಲಿ ಯಾವ ಬೆಳವಣಿಗೆ ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ..