ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವರ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಬರೆಂಗಾಯದ ದೀಪಿಕಾ ಎಂಬವರ ಚಿಕಿತ್ಸೆಗೆ ವಿಶೇಷ ವೇಷ ಧರಿಸಿ ಧನ ಸಂಗ್ರಹಿಸಲಾಯಿತು.
ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಬರೆಂಗಾಯ ಮಜಲಿಮಾರಿನ ದೀಪಿಕಾ ಎಂಬವರು ಕಳೆದ 2022ರ ಏಪ್ರಿಲ್ ನಿಂದ chronic myeloid leukemia ಎಂಬ ರೋಗದಿಂದ ನರಳುತ್ತಿದ್ದು, ಈ ರೋಗದಿಂದ ಗುಣಮುಖರಾಗಲು ಅಸ್ತಿಮಜ್ಜೆ ಶಸ್ತ್ರ ಚಿಕಿತ್ಸೆ ಮಾಡಿಸಬೇಕೆಂದು ವೈದ್ಯರು ಸೂಚಿಸಿರುತ್ತಾರೆ.
ಈ ಶಸ್ತ್ರ ಚಿಕಿತ್ಸೆ 35 ಲಕ್ಷ ರೂ. ಹಣ ಬೇಕಾಗಿದ್ದು, ಬಡಕುಟುಂಬದವರ ಸಂಕಷ್ಟಕ್ಕೆ ದಾನಿ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.
ಧನ ಸಂಗ್ರಹಿಸಲು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಶಿಬಾಜೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶಿಬಾಜೆ ಇದರ ಆಡಳಿತ ಮಂಡಳಿ, ವಿಪತ್ತು ನಿರ್ವಹಣೆ ತಂಡ ಹಾಗೂ ಭಾವನಾ ಕಲಾ ಆರ್ಟ್ಸ್ ಪುತ್ತೂರು ರವರು ವಿಶೇಷ ವೇಷ ಒದಗಿಸಿದ್ದು, ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಜಾತ್ರೆ ಸಂದರ್ಭದಲ್ಲಿ ಸುಮಾರು 24000 ರೂ. ಸಂಗ್ರಹವಾಗಿದ್ದು, ಧನ ಸಹಾಯ ನೀಡುವವರು ಇದ್ದಲ್ಲಿ 7619340622 ಈ ನಂ. ಗೆ ಫೋನ್ ಫೆ ಮಾಡುವಂತೆ ತಿಳಿಸಿದ್ದಾರೆ..