ಬಂಟ್ವಾಳ: ಶುಕ್ರವಾರ ಸಂಜೆ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿದ ಸಂದರ್ಭ ಕೂಡಲೇ ಆತನನ್ನು ಗೂಡಿನಬಳಿಯ ಸತ್ತಾರ್ ಮತ್ತವರ ಸ್ನೇಹಿತ ಸಾದಿಕ್ ರಕ್ಷಿಸಿ, ಜೀವ ಉಳಿಸಿದ್ದಾರೆ.
ರಮ್ಜಾನ್ ಉಪವಾಸದ ಹಿನ್ನೆಲೆಯಲ್ಲಿ ಸಂಜೆ ಮನೆಗೆ ತೆರಳುವ ಸಂದರ್ಭ ಸ್ಥಳೀಯ ಹುಡುಗರು ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿದ ವಿಚಾರವನ್ನು ತಿಳಿಸಿದ್ದು, ಕೂಡಲೇ ಸಾದಿಕ್ ಎಂಬವರ ಸಹಾಯದಿಂದ ಆತನನ್ನು ರಕ್ಷಿಸಿದ್ದೇವೆ. ಯುವಕ ತನ್ನ ಮೊಬೈಲ್ ಸೇತುವೆಯಲ್ಲಿಯೇ ಬಿಟ್ಟು, ನದಿಗೆ ಹಾರಿದ್ದ ಕಾರಣ ಕೂಡಲೇ ಅವರ ಮನೆಯವರನ್ನು ಸಂಪರ್ಕಿಸಲು ಸಾಧ್ಯವಾಯಿತು. ಯುವಕನ ಪ್ರಾಣ ಉಳಿದದ್ದು ಸಮಾಧಾನಕರ ವಿಚಾರ ಎಂದು ಸತ್ತಾರ್ ಹೇಳಿದ್ದಾರೆ.