ಪುತ್ತೂರು : ತಾಲೂಕಿನ ಇರ್ದೆ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಎ 23ರ ರಾತ್ರಿ ವೇಳೆ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ.
ರಾತ್ರಿ ವೇಳೆ ಒಳನುಗ್ಗಿರುವ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ ನಗದು, ಕಚೇರಿಯ ಒಳಗಿದ್ದ ಸಿಸಿ ಕ್ಯಾಮರಾದ ಡಿವಿಆರ್ ಹೊತ್ತೊಯ್ದಿರುವುದು ಅರ್ಚಕರು ಪೂಜೆಗೆಂದು ಎ.24ರಂದು ಬೆಳಿಗ್ಗೆ ದೇವಸ್ಥಾನ ಬಂದ ವೇಳೆ ಬೆಳಕಿಗೆ ಬಂದಿದೆ.
ದೇವಸ್ಥಾನದ ಎದುರಿನ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಮೂರು ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ನಗದು ದೋಚಿದ್ದಾರೆ. ಗರ್ಭಗುಡಿಯ ಬಾಗಿಲಿನ ಬೀಗ ಮುರಿದಿದ್ದಾರೆ. ಕಚೇರಿಯ ಬೀಗ ಮುರಿದು ಸಿಸಿ ಕ್ಯಾಮರಾದ ಡಿವಿಆರ್, ದೇವಸ್ಥಾನದ ಒಳಭಾಗದಲ್ಲಿದ್ದ ಒಂದು ಸಿಸಿ ಕ್ಯಾಮರಾವನ್ನು ಹೊತ್ತೊಯ್ದಿದ್ದಾರೆ.ಸ್ಥಳಕ್ಕೆ ಸಂಪ್ಯ ಠಾಣಾ ಎಸ್.ಐ ಉದಯ ರವಿ ಹಾಗೂ ಸಿಬ್ಬಂದಿಗಳು ಭೇಟಿ ತನಿಖೆ ನಡೆಸುತ್ತಿದ್ದಾರೆ.