ಪುತ್ತೂರು: ಸಾರ್ವಜನಿಕ ಸ್ಥಳದಲ್ಲಿ ಮಾದಕ ದ್ರವ್ಯ ಸೇವನೆ ಮಾಡಿ ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ವಶ ಪಡಿಸಿಕೊಂಡ ಘಟನೆ ನಡೆದಿದೆ.
ಕಬಕ ಗ್ರಾಮ ನೆಹರು ನಗರ ಕಲ್ಲೇಗ ಮಸೀದಿ ಸಮೀಪದ ನಿವಾಸಿ ಮಹಮ್ಮದ್ ಆರೀಸ್ (32) ಬಂಧಿತ ಆರೋಪಿ.

ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಶ್ರೀಕಾಂತ್ ರಾಥೋಡ್ , ಸೋಮನಾಥ್ ನಾಯ್ಕ್ ರವರು ಸಿಬ್ಬಂದಿಗಳಾದ ಜಗದೀಶ, ಮತ್ತು ಶ್ರೀಮಂತ, ಸ್ಕರಿಯ, ಸುರೇಶ್ ರವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಪುತ್ತೂರು ಬಪ್ಪಳಿಗೆ, ಉರ್ಲಾಂಡಿ, ಕರ್ಕುಂಜ, ಬೋಳುವಾರು ಮುಂತಾದ ಕಡೆಗಳಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಪುತ್ತೂರು ತಾಲೂಕು ನೆಲ್ಲಿಗುಂಡಿ ಎಂಬಲ್ಲಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಒಬ್ಬ ವ್ಯಕ್ತಿ ಅನುಚಿತವಾಗಿ ವರ್ತಿಸುತ್ತ ಸಾರ್ವಜನಿಕರನ್ನು ಉದ್ದೇಶಿಸಿ ಹೀನಾಯವಾಗಿ ಮಾತನಾಡುತ್ತಾ ತೊಂದರೆ ನೀಡುತ್ತಿರುವುದಾಗಿ ಮಾಹಿತಿ ಬಂದ ಹಿನ್ನೆಲೆ ಪುತ್ತೂರು ತಾಲೂಕು ನೆಲ್ಲಿಗುಂಡಿ ಎಂಬಲ್ಲಿಗೆ ಬಂದಾಗ ಸಾರ್ವಜನಿಕ ರಸ್ತೆಯ ಬಳಿ ಒಬ್ಬ ವ್ಯಕ್ತಿ ಅನುಚಿತವಾಗಿ ವರ್ತಿಸುತ್ತ ಸಾರ್ವಜನಿಕರಿಗೆ ಮುಜುಗರ ಉಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡು ಬಂದಿದ್ದು, ಆತನನ್ನು ವಿಚಾರಿಸಿದಾಗ ಆತನು ಮಾದಕ ದ್ರವ್ಯ ಗಾಂಜಾ ಸೇವನೆ ಮಾಡಿದ ಬಗ್ಗೆ ಸಂಶಯ ಇರುವುದು ಕಂಡು ಬಂದಿರುವುದರಿಂದ ಆತನನ್ನು ವಶಕ್ಕೆ ಪಡೆದುಕೊಂಡು ಮಂಗಳೂರು, ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದಾಗ DEPARTMENT OF FORENSIC MEDICINE AND TOXICOLOGY K.S HEGDE ವೈದ್ಯಾಧಿಕಾರಿಗಳು ಪರೀಕ್ಷಿಸಿ ವೈದ್ಯಕೀಯ ದೃಢಪತ್ರ ನೀಡಿದ್ದು, ವೈದ್ಯಕೀಯ ದೃಢ ಪತ್ರದಲ್ಲಿ ಗಾಂಜಾ ಸೇವನೆ ಮಾಡಿದ್ದು ದೃಢಪಟ್ಟಿರುವುದರಿಂದ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 15/2023, ಕಲಂ: 27 (ಬಿ ) ಎನ್.ಡಿ.ಪಿ.ಎಸ್ ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ..
 
	    	

























