ಬೆಳ್ತಂಗಡಿ: ನಿರ್ಲಕ್ಷತನದಿಂದ ವ್ಯಕ್ತಿಯೋರ್ವರು ಪರವಾನಿಗೆ ಹೊಂದಿರುವ ಕೋವಿಯನ್ನು ಸಿಡಿಸಿದ್ದು, ಗಾಯಗೊಂಡಿರುವ ವ್ಯಕ್ತಿ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ಬೆಳ್ತಂಗಡಿ ನಿಡ್ಲೆ ನೂಜಿಲ ನಿವಾಸಿ ಡೀಕಯ್ಯ ರವರು ಅವರ ಸಹೋದರ ಬೆಳ್ತಂಗಡಿ ನಿಡ್ಲೆ ನೂಜಿಲ ನಿವಾಸಿಲಕ್ಷ್ಮಣ ಗೌಡ ರವರ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.
ಮಾ.2 ರಂದು ರಾತ್ರಿ ಅಣ್ಣನಾದ ಲಕ್ಷ್ಮಣ ಗೌಡ ರವರ ಮನೆಗೆ ಡೀಕಯ್ಯ ರವರು ಬಂದಿದ್ದು, ರಾತ್ರಿ ವೇಳೆ ನಾಯಿಗಳು ಎಡಬಿಡದೇ ಬೊಗಳುತ್ತಿರುವುದನ್ನು ಗಮನಿಸಿದ ಲಕ್ಷ್ಮಣ ಗೌಡ ರವರು ತನ್ನ ಜಮೀನಿಗೆ ಬರುತ್ತಿರುವ ಕಾಡು ಪ್ರಾಣಿಗಳನ್ನು ಹೆದರಿಸಲು ಪರವಾನಿಗೆ ಹೊಂದಿರುವ ಎಸ್‌ಬಿಬಿಎಲ್ ತೋಟೆ ಕೋವಿಯನ್ನು ತೆಗೆದುಕೊಂಡು ಬಂದು ಅದಕ್ಕೆ ಮದ್ದುಗುಂಡನ್ನು ತುಂಬಿಸಿ ಡೀಕಯ್ಯ ರವರು ಅಂಗಳದಲ್ಲಿ ಇದ್ದ ವೇಳೆ ಅವರು ಅಂಗಳದಲ್ಲಿ ನಿಂತಿರುವುದನ್ನು ಗಮನಿಸದೇ ನಿರ್ಲಕ್ಷ್ಯ ವಹಿಸಿ ದುಡುಕತನದಿಂದ ಮನೆಯ ಮುಂದುಗಡೆ ಇರುವ ತೋಟದ ಕಡೆ ಗುರಿ ಇಟ್ಟು ಕೋವಿಯನ್ನು ಸಿಡಿಸಿದ್ದು, ಈ ವೇಳೆ ಚಿಕ್ಕ 2 ಗುಂಡುಗಳು ಡೀಕಯ್ಯ ಬಲಕೈಯ ಕೋಲು ಕೈಗೆ ಮತ್ತು ಎಡಕಾಲಿನ ತೊಡೆಗೆ ತಾಗಿ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಕಲಂ: 336,337 ಐಪಿಸಿ ಮತ್ತು 30 Arms ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.