ಮಂಗಳೂರು: ಕಳೆದ 20 ವರ್ಷಗಳಿಂದ ಕೊರಗಜ್ಜನ ಆರಾಧಕರಾಗಿ ಗುರುತಿಸಿಕೊಂಡಿದ್ದ ಖಾಸಿಂ ಸಾಹೇಬ್(66) ಅವರು ಹೃದಯಾಘಾತದಿಂದಾಗಿ ಇಂದು ಮುಂಜಾನೆ ನಿಧನರಾದರು.
ಖಾಸಿಂ ಅವರು ಮೂಲತಃ ಕೇರಳದ ಪಾಲಕ್ಕಾಡ್ ಜಿಲ್ಲೆಯವರಾಗಿದ್ದು, ಸದ್ಯ ಮಂಗಳೂರು ಹೊರವಲಯದ ಮುಲ್ಕಿ ಬಳ್ಕುಂಜೆಯಲ್ಲಿ ನೆಲೆಸಿದ್ದರು.
ಖಾಸಿಂ ಅವರು ಕೇರಳದಿಂದ 35 ವರ್ಷದ ಹಿಂದೆ ಬಳ್ಕುಂಜೆಗೆ ಬಂದಿದ್ದು, ದೈವಗಳಿಗೆ ಗುಡಿ ನಿರ್ಮಿಸಿ ಪ್ರತಿದಿನ ಪೂಜಿಸುತ್ತಿದ್ದರು.