ಪುತ್ತೂರು: ನಾವು ನಮ್ಮನ್ನೇ ಕ್ರಿಸ್ತನ ಮೌಲ್ಯಗಳೊಂದಿಗೆ ರೂಪಾಂತರಗೊಳಿಸಿದರೆ, ಇಡೀ ಸಮುದಾಯವನ್ನು ಬದಲಾಯಿಸಬಹುದು ಎಂದು ವಂ. ಲ್ಯಾರಿ ಪಿಂಟೊ ಹೇಳಿದರು. ಅವರು ಮಾಯ್ ದೆ ದೇವುಸ್ ಚರ್ಚ್‌ನ 2022-23 ನೇ ವಾರ್ಷಿಕ ಕ್ರೈಸ್ತ ಶಿಕ್ಷಣ ದಿವಸದ ಸಂಭ್ರಮದಲ್ಲಿ ಮಾತನಾಡಿದರು.

ಮಾಯ್ ದೆ ದೇವುಸ್ ಚರ್ಚ್ ಇದರ ವ್ಯಾಪ್ತಿಗೊಳಪಟ್ಟ ಕ್ರೈಸ್ತ ಶಿಕ್ಷಣದ ವಾರ್ಷಿಕ ದಿವಸವು ದಿವ್ಯ ಬಲಿ ಪೂಜೆಯನ್ನು ಅರ್ಪಿಸುವುದರ ಮೂಲಕ ಚಾಲನೆ ಕೊಡಲಾಯಿತು. ಪ್ರಧಾನ ಧರ್ಮಗುರುಗಳಾಗಿ ವಂ| ಲ್ಯಾರಿ ಪಿಂಟೊ , ಸಹಾಯಕ ನಿರ್ದೇಶಕರು ಸಂತ ಅಂತೋಣಿಯವರ ಆಶ್ರಮ ಜೆಪ್ಪು ರವರು ನೆರವೇರಿಸಿದರು.
ಚರ್ಚ್‌ನ ಧರ್ಮಗುರುಗಳಾದ ವಂ. ಲಾರೆನ್ಸ್ ಮಸ್ಕರೇನಸ್, ಸಹಾಯಕ ಧರ್ಮಗುರುಗಳಾದ ವಂ. ಕೆವಿನ್ ಲಾರೆನ್ಸ್ ಡಿಸೋಜಾ ರವರು ಬಲಿಪೂಜೆಯಲ್ಲಿ ಉಪಸ್ಥಿತರಿದ್ದರು.

ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ರೂಪಕ, ನೃತ್ಯಗಳು, 1 ರಿಂದ 12ರ ವರೆಗೆ ತರಗತಿವಾರು ಕ್ರೈಸ್ತ ಮಕ್ಕಳು ನಟಿಸಿ, ಸಮುದಾಯಕ್ಕೆ ಮನರಂಜನೆ ನೀಡಿದರು. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂತ ಫಿಲೋಮಿನಾ ಕ್ಯಾಂಪಸ್ ನಿರ್ದೇಶಕರಾದ ವಂ.ಸ್ಟ್ಯಾನಿ ಪಿಂಟೋ, ಸಂತ ಫಿಲೋಮಿನಾ ಪಿ.ಯು ಕಾಲೇಜ್‌ನ ಪ್ರಾಂಶುಪಾಲ ವಂ. ಅಶೋಕ್ ರಾಯನ್ ಕ್ರಾಸ್ತಾ, ಪುತ್ತೂರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿಕೋಸ್ಟಾ , ಕಾರ್ಯದರ್ಶಿ ಎವ್ಲಿನ್ ಡಿಸೋಜಾ, ಆಯೋಗದ ಸಂಯೋಜಕರಾದ ಜೋನ್ ಡಿಸೋಜಾ ಮತ್ತು ಸದಸ್ಯರು ಉಪಸ್ಥಿತರಿದ್ದರು. ಪುತ್ತೂರು ಚರ್ಚ್‌ನ ಕ್ರೈಸ್ತ ಶಿಕ್ಷಣದ ಸಂಯೋಜಕ ಕ್ಲೆಮೆಂಟ್ ಪಿಂಟೊ ಸ್ವಾಗತಿಸಿ, ಸಹಾಯಕ ಧರ್ಮಗುರುಗಳಾದ ವಂ.ಕೆವಿನ್ ಲಾರೆನ್ಸ್ ಡಿಸೋಜಾ ವಂದಿಸಿದರು. ವೈ.ಸಿ.ಎಸ್‌ನ ವಿದ್ಯಾರ್ಥಿಗಳಾದ ಫಿಯೋನಾ ಮತ್ತು ಜೆನ್ನಿಫರ್‌ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಸಂದರ್ಭದಲ್ಲಿ ಕೈಸ್ತ ಶಿಕ್ಷಣದ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಅತೀ|ವಂ| ಲಾರೆನ್ಸ್ ಮಸ್ಕರೇನಸ್ ರವರು ಬಹುಮಾನವನ್ನು ನೀಡಿ ಅಭಿನಂದಿಸಿದರು.

ಕ್ರೈಸ್ತ ಶಿಕ್ಷಣದ ತರಗತಿಗಳಲ್ಲಿ ಪೂರ್ಣ ಪ್ರಮಾಣ ಹಾಜರಾತಿ, ಒಂದು ಗೈರು ಹಾಗೂ ಇತರ ವಿದ್ಯಾರ್ಥಿಗಳಿಗೆ ವಂ| ಲ್ಯಾರಿ ಪಿಂಟೊರವರು ಬಹುಮಾನ ವಿತರಿಸಿ ಅಭಿನಂದಿಸಿದರು. ಕ್ರೈಸ್ತ ಶಿಕ್ಷಣದ ತರಗತಿಗಳನ್ನು ನಿಸ್ವಾರ್ಥ ಮನೋಭಾವದಿಂದ ಶಿಕ್ಷಣ ನೀಡಿ ಸಹಕರಿಸಿದ ಎಲ್ಲಾ ಶಿಕ್ಷಕ – ಶಿಕ್ಷಕಿಯರಿಗೆ ಕಿರು ಕಾಣಿಕೆಯನ್ನು ನೀಡುವ ಮೂಲಕ ಧರ್ಮಗುರುಗಳು ಎಲ್ಲರನ್ನೂ ಸನ್ಮಾನಿಸಿದರು.





