ಪುತ್ತೂರು: ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ವಿರುದ್ಧ ಧಾರ್ಮಿಕ
ದತ್ತಿ ಇಲಾಖೆಗೆ ನನ್ನ ಅರಿವಿಗೆ ಬಾರದೆ ದೂರು ನೀಡಲಾಗಿದೆ. ಲೋಕಪ್ಪ ಗೌಡ ದಂಪತಿಗಳು, ಜನಾರ್ಧನ ಜೋಯಿಸ, ಪ್ರವೀಣ್ ಆಚಾರ್ಯ ರವರ ಕುಮ್ಮಕ್ಕಿ ನಿಂದ ನಡೆದಿರುವುದು ನನಗೇನು ಗೊತ್ತಿಲ್ಲ. ನಾನು ಅರ್ಜಿಯನ್ನು ಓದದೆ ಸಹಿ ಹಾಕಿರುವುದು ನನ್ನಿಂದ ತಪ್ಪಾಗಿದೆ. ಇದೀಗ ದೂರಿನ ಅರಿವಾದ ಹಿನ್ನೆಲೆಯಲ್ಲಿ ನಾನು ದೂರನ್ನು ಹಿಂಪಡೆಯಲಿದ್ದೇನೆ ಎಂದು ನರಿಮೊಗರು ನಿವಾಸಿ ಜಗದೀಶ್ ಭಂಡಾರಿ ರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನಾಲ್ಕು ಮಂದಿಯ ಕುಮ್ಮಕ್ಕಿನಿಂದ ನನ್ನ ಸಹಿ ಪಡೆಯಲಾಗಿದ್ದು, ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ನಾಲ್ಕು ವ್ಯಕ್ತಿಗಳು ಅಕ್ರಮ ಕೂಟ ಕಟ್ಟಿಕೊಂಡು ಹಿಂದೂ ಸಮಾಜದಲ್ಲಿ ಶಾಂತಿ ಭಂಗ ಮಾಡುತ್ತಿದ್ದಾರೆ.
ಸಮಾಜದ ನಂಬಿಕೆಗೆ ದ್ರೋಹ ಬಗೆಯುವ ಕಾರ್ಯವನ್ನು
ಮಾಡಲಾಗುತ್ತಿದೆ. ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ಆಡಳಿತ
ವ್ಯವಸ್ಥೆ ಮತ್ತು ಅಭಿವೃದ್ಧಿ ಕೆಲಸಗಳು ಸೂಸುತ್ರವಾಗಿ ನಡೆಯುತ್ತಿದ್ದು, ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ವಿರೋಧಗಳಿಲ್ಲ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯ ವೇಳೆ ಜಗದೀಶ್ ಭಂಡಾರಿ ಅವರು ಸಹಿ ಮಾಡಿ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಲೋಕಪ್ಪ ಗೌಡ ಸಹಿತ ನಾಲ್ವರ ಹೆಸರು ಉಲ್ಲೇಖಿಸಿದ್ದಾರೆ.
ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ದೂರು ನೀಡಲಾಗಿತ್ತು. ಈ ಬಗ್ಗೆ ಹಲವು ದಿನಗಳಿಂದ ಚರ್ಚೆಗಳು ನಡೆಯುತ್ತಿತ್ತು..