ಬಂಟ್ವಾಳ: ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕು ಬಾಳ್ತಿಲ ದಾಸಕೋಡಿ ನಿವಾಸಿ ಚಂದ್ರಶೇಖರ ರವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದ್ರಶೇಖರ ರವರು ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿಕೊಂಡಿದ್ದು, ಪುತ್ರಿಯಾದ ವೈಷ್ಣವಿ ಕೆ ಸಿ ( 17) ಕಲ್ಲಡ್ಕದ ಶ್ರೀರಾಮ ಶಾಲೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದು, ಸದ್ರಿ ಶಾಲೆಯಲ್ಲಿ ಅವರ ಪತ್ನಿಯು ಶಿಕ್ಷಕರಾಗಿ ಕೆಲಸ ಮಾಡಿಕೊಂಡಿರುತ್ತಾರೆ.
ಮಾ.9 ರಂದು ಚಂದ್ರಶೇಖರ ರವರು ದ್ವಿತೀಯ ಪಿಯುಸಿ ಪರೀಕ್ಷಾ ವಿಶೇಷ ಕರ್ತವ್ಯವಿರುವುದರಿಂದ ಮನೆಯಿಂದ ಮುಂಜಾನೆ ತೆರಳಿದ್ದು, ಮಧ್ಯಾಹ್ನ ಸಮಯ ಅವರ ಪತ್ನಿಯು ದೂರವಾಣಿ ಕರೆ ಮಾಡಿ ಮಗಳು ವೈಷ್ಣವಿ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡ ವಿಚಾರವನ್ನು ತಿಳಿಸಿ ಚಿಕಿತ್ಸೆಗೆ ಕಲ್ಲಡ್ಕದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ಬಗ್ಗೆ ತಿಳಿಸಿದಂತೆ ಚಂದ್ರಶೇಖರ ರವರು ಕೂಡಲೇ ಕಲ್ಲಡ್ಕದ ಆಸ್ವತ್ರೆಗೆ ಬಂದು ಪತ್ನಿಯಲ್ಲಿ ವಿಚಾರಿಸಿದಾಗ, ಬೆಳಿಗ್ಗೆ ಮಕ್ಕಳೊಂದಿಗೆ ಕಲ್ಲಡ್ಕ ಶಾಲೆಗೆ ಬಂದಿದ್ದು, ಮಗಳಾದ ವೈಷ್ಣವಿ ಕೆ ಸಿ ದ್ವಿತೀಯ ಪರೀಕ್ಷೆ ಇರುವುದರಿಂದ ಶಾಲಾ ಗ್ರಂಥಾಲಯದಲ್ಲಿ ಓದುತ್ತಿದ್ದಳು. ಬೆಳಿಗ್ಗೆ 9.45ಕ್ಕೆ ಗ್ರಂಥಾಲಯಕ್ಕೆ ಪತ್ನಿಯು ತೆರಳಿದಾಗ ಮಗಳು ವೈಷ್ಣವಿ ನನಗೆ ಗ್ರಂಥಾಲಯದಲ್ಲಿ ಓದಲು ಆಗುತ್ತಿಲ್ಲ ಮನೆಗೆ ಹೋಗಿ ಓದುವುದಾಗಿ ತಿಳಿಸಿ ಮನೆಗೆ ಹೋಗಿರುತ್ತಾಳೆ. ನಂತರ ಪತ್ನಿಯು ಮನೆಯ ನೆರೆಕೆರೆಯವರಿಗೆ ಕರೆ ಮಾಡಿ ಮಗಳು ಮನೆಗೆ ಬಂದ ಬಗ್ಗೆ ವಿಚಾರ ಮಾಡುವಂತೆ ತಿಳಿಸಿದ್ದು, ಆಗ ನೆರೆ ಮನೆಯವರು ಹೋದಾಗ ಮನೆಯ ಬಾಗಿಲು ಒಳಗಿನಿಂದ ಲಾಕ್ ಮಾಡಿರುವ ಬಗ್ಗೆ ಹಾಗೂ ಕರೆದಾಗ ಒಳಗಿನಿಂದ ಯಾವುದೇ ಧ್ವನಿ ಬರುತ್ತಿಲ್ಲವಾಗಿ ತಿಳಿಸಿರುತ್ತಾರೆ.
ಬೆಳಿಗ್ಗೆ 10.15ಕ್ಕೆ ಪತ್ನಿಯು ಮನೆಗೆ ಹೋದಾಗ ಬಾಗಿಲು ಲಾಕ್ ಮಾಡಿದ್ದು, ಬಾಗಿಲನ್ನು ಮುರಿದು ಮನೆಯ ಒಳಗೆ ಹೋದಾಗ ಮನೆಯ ಊಟದ ಹಾಲ್ ನಲ್ಲಿ ವೈಷ್ಣವಿಯು ಪ್ಯಾನ್ ಗೆ ನೇಣು ಬಿಗಿದು ಕೊಂಡಿದ್ದು, ಕೂಡಲೇ ಕುತ್ತಿಗೆಗೆ ಹಾಕಿಕೊಂಡಿದ್ದ ಸೀರೆಯ ಗಂಟನ್ನು ಬಿಚ್ಚಿ ಚಿಕಿತ್ಸೆ ಬಗ್ಗೆ ಕಲ್ಲಡ್ಕದ ಆಸ್ವತ್ರೆಗೆ ಕರೆದುಕೊಂಡು ಬಂದಿರುವುದಾಗಿ ಹಾಗೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವ ವಿಚಾರವನ್ನು ತಿಳಿಸಿರುತ್ತಾರೆ.
ದ್ವಿತೀಯ ಪಿಯುಸಿ ಪರೀಕ್ಷಾ ಭಯದಿಂದ ಅಥವಾ ಇನ್ನಾವುದೋ ಕಾರಣಗಳಿಂದ ಕುತ್ತಿಗೆಗೆ ನೇಣು ಬಿಗಿದು ಮೃತಪಟ್ಟಿರುವುದಾಗಿದೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಕಲಂ: 174 ಸಿ ಆರ್ ಪಿ ಸಿ ರಂತೆ ಪ್ರಕರಣ ದಾಖಲಾಗಿದೆ.