ಪುತ್ತೂರು: ಮಡಿಕೇರಿ-ಮೈಸೂರು ರಾಜ್ಯ ಹೆದ್ದಾರಿಯ ಕೌಡಿಚ್ಚಾರ್ ಸಮೀಪದ ಪೆರಿಗೇರಿ ಎಂಬಲ್ಲಿ ಮಾ.11ರಂದು ಬೆಳಿಗ್ಗೆ ಬೈಕೊಂದು ಕೈನೆಟಿಕ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ.
ದರ್ಬೆಯ ಪ್ರತಿಷ್ಠಿತ ಕಾಲೇಜೊಂದರ ಉಪನ್ಯಾಸಕರೋರ್ವರು ಬೆಳಿಗ್ಗೆ ಪೆರಿಗೇರಿಯಿಂದ ಕಾಲೇಜಿಗೆ ಬೈಕಿನಲ್ಲಿ ಆಗಮಿಸುವಾಗ ಮಹಿಳೆಯೋರ್ವರು ಚಲಾಯಿಸುತ್ತಿದ್ದ ಕೈನೆಟಿಕ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಕೈನೆಟಿಕ್ ಚಲಾಯಿಸುತ್ತಿದ್ದ ಮಹಿಳೆ ರಸ್ತೆಗೆ ಬಿದ್ದು ಹೊರಳಾಡುತ್ತಿದ್ದರೂ ಬೈಕ್ ಚಲಾಯಿಸುತ್ತಿದ್ದ ಉಪನ್ಯಾಸಕ ಬೈಕ್ ನಿಲ್ಲಿಸದೆ ಪರಾರಿಯಾಗಿ ಅಮಾನವೀಯತೆ ಮೆರೆದಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೆ, ಕನಿಷ್ಠ ಆರೋಗ್ಯ ವಿಚಾರಿಸದೆ ಹಿಟ್ ಅಂಡ್ ರನ್ ಮಾಡಿರುವ ಉಪನ್ಯಾಸಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.