ಬಂಟ್ವಾಳ: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್. ಧ್ರುವನಾರಾಯಣ್ ಅವರ ಹಠಾತ್ ಅಗಲಿಕೆಗೆ ಬಂಟ್ವಾಳ ಕಾಂಗ್ರೆಸ್ ತೀವ್ರ ಸಂತಾಪ ಸೂಚಿಸಿದೆ.
ನಿಧನದ ಶೋಕಾರ್ಥವಾಗಿ ಶನಿವಾರ ಮುಂದುವರಿಯಬೇಕಾಗಿದ್ದ “ಬಂಟ್ವಾಳ ಪ್ರಜಾಪ್ರತಿನಿಧಿ” ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದ್ದು, ಮಾಜಿ ಸಚಿವರಾದ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬ್ರಹ್ಮರಕೂಟ್ಲು ಭಜನಾ ಮಂದಿರಲ್ಲಿ ಧ್ರುವನಾರಾಯಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷ ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪದ್ಮನಾಭ ರೈ, ಸಂಪತ್ ಕುಮಾರ್ ಶೆಟ್ಟಿ, ಶಬೀರ್ ಸಿದ್ದಕಟ್ಟೆ, ಲೋಲಾಕ್ಷ ಶೆಟ್ಟಿ, ದೇವಿಪ್ರಸಾದ್ ಪೂಂಜಾ, ಶಿವಪ್ರಸಾದ್ ಕನಪಾಡಿ ಕಳ್ಳಿಗೆ ವಲಯ ಕಾಂಗ್ರೆಸ್ ಅಧ್ಯಕ್ಷರು,
ಮನೋಜ್ ಕನಪಾಡಿ,ಕಳ್ಳಿಗೆ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿರಾಜ್ ಜೈನ್, ಪಂಚಾಯತ್ ಸದಸ್ಯ ವಿಜಯ್ ಡಿಸೋಜಾ, ಪಚ್ಚಿನಡ್ಕ ಪಂಚಾಯತ್ ಸದಸ್ಯರು ದಿವಾಕರ್ ಪಂಬದಬೆಟ್ಟು, ಮಾಜಿ ಎಪಿಎಂ ಸದಸ್ಯೆ ಮಮತ, ಪಂಚಾಯತ್ ಸದಸ್ಯರಾದ ಯೋಗೀಶ್ ಜ್ಯೋತಿಗುಡ್ಡೆ, ಬೂತ್ ಅಧ್ಯಕ್ಷರಾದ ಕಮಲಾಕ್ಷ ಮುಂಡಾಜೆ, ಬೂತ್ ಅಧ್ಯಕ್ಷ ಜಗದೀಶ್ ಕಂಜತ್ತೂರ್ ಮೊದಲಾದವರು ಭಾಗವಹಿಸಿದ್ದರು.