ಪುತ್ತೂರು: ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯಲ್ಲಿ 2022-23ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮಾ.11 ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಅಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರ ರವರು ವಹಿಸಿದ್ದರು.
ಸಭೆಯಲ್ಲಿ ಸಂಚಾಲಕರಾದ ಭಾಸ್ಕರ ಆಚಾರ್, ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯ, ಸದಸ್ಯರಾದ ಹರೀಶ್ ಪುತ್ತೂರಾಯ, ಸುಬ್ರಾಯ ಬಿ.ಎಸ್, ಮುಖ್ಯೋಪಾಧ್ಯಾಯ ರಾದ ಜಯಮಾಲ ವಿ.ಎನ್, ಶಿಕ್ಷಕ- ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.
ಈ ಸಂದರ್ಭ ದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಅಧ್ಯಕ್ಷರು ಶ್ರೀ ಕೃಷ್ಣನ ವಿಗ್ರಹ ನೀಡಿ ಆಶೀರ್ವದಿಸಿದರು. ಪ್ರಾಸ್ತವಿಕ ಮಾತುಗಳೊಂದಿಗೆ ಬಂದಂತಹ ಎಲ್ಲರನ್ನು ಮುಖ್ಯೋಪಾಧ್ಯಾಯರು ಅತ್ಯಂತ ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು.
ಶಾಲಾ ಸಂಚಾಲಕರು ಮಾತನಾಡಿ ಸಮಾಜದಲ್ಲಿ ಪ್ರತಿಫಲವನ್ನು ಅಪೇಕ್ಷಿಸದೆ ಸಹಾಯ ಮಾಡುವ ಮನೋಭಾವ ಹಾಗೂ ಎಲ್ಲರು ಗುರುತಿಸಿಕೊಳ್ಳುವ ಸ್ವಭಾವ ನಿಮ್ಮದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾತನಾಡಿ ಮಕ್ಕಳನ್ನು ಹುರಿದುಂಬಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಯರಾಮ ಕೆದಿಲಾಯ ಶಿಬರ ರವರು ಮಾತನಾಡಿ, ಜೀವನದಲ್ಲಿ ಆಕಸ್ಮಿಕವಾಗಿ ಬರುವ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರಬೇಕು. ಜೀವನದ ಮೌಲ್ಯಗಳನ್ನು ಭಗವದ್ಗೀತೆಗೆ ಅನುಗುಣವಾಗಿ ಶ್ರೀಕೃಷ್ಣನನ್ನು ಆರಾಧಿಸುತ್ತ ಸಮಾಜದಲ್ಲಿ ಸಜ್ಜನರಾಗಿ ಬಾಳಿ ಎಂದು ಆಶೀರ್ವದಿಸಿದರು.
ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಮಾತನಾಡಿ ಮುಂದೆ ಬರುವ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತಮ ಪ್ರಜೆಗಳಾಗಿ ಎಂದು ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ಶಾಲಾ ಶಿಕ್ಷಕಿ ಉಷಾ ಪ್ರಾರ್ಥಿಸಿದರು. ವಾಣಿ ಧನ್ಯವಾದ ಸಲ್ಲಿಸಿದರು. ಹಾಗೂ ಕಾರ್ಯಕ್ರಮವನ್ನು ಪ್ರಮೀಳಾ ರವರು ನಿರೂಪಿಸಿದರು.