ಮಂಗಳೂರು: ಪೊಲೀಸ್ ಎಂದು ಹೇಳಿ ಮಹಿಳೆಯನ್ನು ಬೆದರಿಸಿ ಹಣ ಪಡೆದು ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾವೂರು ಈಶ್ವರನಗರ ಸರಕಾರಿ ಗುಡ್ಡೆಯ ಶಿವರಾಜ್ ದೇವಾಡಿಗ ಬಂಧಿತ ಆರೋಪಿ.
ಸವಿತಾ (45) ಎಂಬವರಿಗೆ ಶಿವರಾಜ್ ತಾನು ಪೊಲೀಸ್ ಎಂಬುದಾಗಿ ತಿಳಿಸಿ “ನೀವು ಮಸಾಜ್ ಪಾರ್ಲರ್ ನಡೆಸುವುದಕ್ಕೆ ಹಾಗೂ ಹೆಚ್ಚು ಬಂಗಾರ ಮತ್ತು ಹಣವನ್ನು ಇಟ್ಟುಕೊಂಡಿರುವ ಬಗ್ಗೆ ದೂರು ಬಂದಿದ್ದು ಪ್ರಕರಣ ಮುಚ್ಚಿ ಹಾಕಲು ಹಣ ಕೊಡಬೇಕು ಇಲ್ಲದಿದ್ದರೆ ದಾಳಿ ಮಾಡುತ್ತೇವೆ” ಎಂದು ಬೆದರಿಸಿ 38,000 ರೂ. ಪಡೆದುಕೊಂಡಿದ್ದ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತ ಈ ಹಿಂದೆ ಗೃಹರಕ್ಷಕ ದಳದಲ್ಲಿದ್ದ.ಅದೇ ಯೂನಿಫಾರಂ ಹಾಕಿಕೊಂಡು ಮಹಿಳೆಯನ್ನು ಹೆದರಿಸಿದ್ದ ಎಂದು ತಿಳಿದು ಬಂದಿದೆ.