ವಿಧಾನ ಸಭಾ ಚುನಾವಣೆ-2023 ಸಮೀಪಿಸುತ್ತಿದ್ದು, ಗಡಿಭಾಗಗಳಲ್ಲಿ ಪೊಲೀಸರು ತಪಾಸಣೆ ಆರಂಭಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಅಂತರಾಜ್ಯ ಚೆಕ್ ಪೋಸ್ಟ್ ಪಾಣಾಜೆ ಹಾಗೂ ಈಶ್ವರಮಂಗಲದಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.

ಪುತ್ತೂರು ಗ್ರಾಮಾಂತರ ಪಿಎಸ್ ವ್ಯಾಪ್ತಿಯಲ್ಲಿ ಪಾಣಾಜೆ ಮತ್ತು ಈಶ್ವರಮಂಗಲ ಚೆಕ್ ಪೋಸ್ಟ್ ತೆರೆಯಲಾಗಿದೆ.

ಕೇರಳಕ್ಕೆ ತೆರಳುವ ಹಾಗೂ ಕೇರಳದಿಂದ ಕರ್ನಾಟಕಕ್ಕೆ ಬರುವ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.
