ಕಳೆದ ಒಂದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ದೃಶ್ಯವಿದು. ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾ ಎಂದರೆ ಏನಾದರೂ ಒಂದು ಸುದ್ದಿ ವೈರಲ್ ಆಗುತ್ತಿರುತ್ತದೆ. ಆದ್ರೆ ಈ ಕ್ರಿಕೆಟ್ ಆಟದ ದೃಶ್ಯ ವೈರಲ್ ಆಗಲು ಕಾಣವೇ ಫೀಲ್ಡರ್ ನ ಶ್ರಮ.
ಮುಂಬೈ ಇಂಡಿಯನ್ಸ್ ತಂಡ ತನ್ನ ಇನ್‌ಸ್ಟಾಗ್ರಾಂನಲ್ಲಿ ಈ ದೃಶ್ಯ ಹಂಚಿಕೊಂಡಿದೆ.
ಬೌಲರ್ ಕಷ್ಟಪಟ್ಟ ಸ್ಪೀನ್ ಹಾಕಿದರೆ, ಅತ್ತ ದಾಂಡಿಗ ವೈಡ್ ಬಾಲಿಗೆ ಕಷ್ಟಪಟ್ಟು ಬ್ಯಾಟ್ ಬೀಸುತ್ತಾನೆ. ಎತ್ತರ ಮಾಮರ ಎತ್ತಣ ಕೋಗಿಲೆ ಎಂಬಂತೆ ಆ ಚೆಂಡು ಮಾತ್ರ ಎತ್ತರಕ್ಕೆ ಹೋಗಿ ಕೆಳಕ್ಕೆ ಬಿದ್ದು ಬೌಂಡರಿಯತ್ತ ಸಾಗುತ್ತದೆ. ಈ ವೇಳೆ ಅಲ್ಲೇ ಇದ್ದ ಫೀಲ್ಡರ್ ಆ ಚೆಂಡನ್ನು ಹಿಡಿಯಲು ಹರ ಸಾಹಸ ಪಡುತ್ತಾನೆ.
ನೆಲಕ್ಕೆ ಬಿದ್ದು ಹಿಡಿಯುತ್ತಾನೆ. ಕೊನೆಗೆ ಚೆಂಡನ್ನು ಕೀಪರ್ ಬಳಿ ಎಸೆಯಲು ಮುಂದಾದಾಗ ಆತನ ಕಾಲಿಗೆ ಚೆಂಡು ತಾಗಿ ಬೌಂಡರಿಯತ್ತ ಸಾಗುತ್ತದೆ.
ಫೀಲ್ಡರ್ ಚೆಂಡಿನ ಹಿಂದೆ ಓಡಿ, ಬಿದ್ದು ಕೊನೆಗೆ ಆತನ ಕಾಲಿಗೆ ತಾಗಿ ಚೆಂಡು ಬೌಂಡರಿ ಹೋಗುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಈ ದೃಶ್ಯ ಕಂಡು ನಕ್ಕರೆ, ಇನ್ನು ಕೆಲವರು ಕಮೆಂಟ್ ಬರೆದಿದ್ದಾರೆ..