ಒಂದು ಪಕ್ಷದ ಮುಖಂಡರಿಗೆ ಇನ್ನೊಂದು ಪಕ್ಷದ ಅಥವಾ ಸಂಘಟನೆ ಮುಖಂಡರು ಮಾತಿನ ಮೂಲಕ ಟಾಂಗ್ ನೀಡುವುದು ಹೊಸತೇನು ಅಲ್ಲ.., ಅದೇ ರೀತಿ ಕೆಲ ದಿನಗಳ ಹಿಂದೆ ಹಿಂದೂ ಮುಖಂಡರೊಬ್ಬರು ನೀಡಿದ ಹೇಳಿಕೆಗೆ ಕಾಂಗ್ರೆಸ್ ಮುಖಂಡ ಅಶೋಕ್ ರೈ ರವರು ಅಭಿಪ್ರಾಯ ವ್ಯಕ್ತಡಿಸಿದ್ದಾರೆ.
ಅಶೋಕ್ ಕುಮಾರ್ ರೈ ಕೋಡಿಂಬಾಡಿ ರವರ ನೇತೃತ್ವದಲ್ಲಿ ನಡೆದ ಉಪ್ಪಿನಂಗಡಿ ಕಂಬಳದಲ್ಲಿ ಮಾತನಾಡಿದ ಅವರು, ‘ಕಂಬಳದಲ್ಲಿ ರಾಜಕೀಯದ ಬಗ್ಗೆ ಮಾತನಾಡಬಾರದು.., ಉಪ್ಪಿನಂಗಡಿ ಕಂಬಳಕ್ಕೆ ರಾಜಕೀಯ ಬಣ್ಣ ಯಾವತ್ತೂ ಬಂದಿಲ್ಲ, ಎಲ್ಲರೂ ಸೇರಿಕೊಂಡು ನಡೆಸುತ್ತಾ ಬಂದಿದ್ದೇವೆ.
‘ಕೆಲವುದಕ್ಲ್ ಪನ್ಪೆರ್ ದೇವಸ್ಥಾನದ ಬ್ರಹ್ಮಕಲಶ ಮಲ್ಪೆರ್, ಕಂಬಳದ ಕಂಡಡ್ ಪುರಲ್ಡ್ ಬರ್ಪೆರ್ ಅರೆನ್ ವಿರೋಧ ಮಲ್ಪುಲೆ ಪಂದ್ : ಅಕ್ಲ್ ಹಿರಿಯೆರ್ ಅಕ್ಲೆಗ್ ಉತ್ತರ ಕೊರ್ರೆ ಪೋಪುಜಿ : ಕೆಲವರು ಹೇಳುತ್ತಾರೆ ಅಶೋಕ್ ರೈ ಗಳು ಅಲ್ಲಿದ್ದಾರೆ.., ಇಲ್ಲಿದ್ದಾರೆ., ದೇವಸ್ಥಾನ ಬ್ರಹ್ಮಕಲಶ ಮಾಡುತ್ತಾರೆ. ಕಂಬಳ ಕರೆಯಲ್ಲಿ ಉರುಳಿ ಬರುತ್ತಾರೆ .. ನನ್ನನ್ನು( ಅಶೋಕ್ ರೈ) ಯನ್ನು ವಿರೋಧಿಸಿ ಎನ್ನುತ್ತಾರೆ.
ನಾನು ಅವರಿಗೆ ಉತ್ತರ ನೀಡಲು ಹೋಗುವುದಿಲ್ಲ., ಅವರು ನಮ್ಮ ಹಿರಿಯರು, ಗೌರವಾನ್ವಿತರು ಹಾಗಾಗಿ ನಾನು ಅವರಿಗೆ ಯಾರಿಗೂ ಉತ್ತರ ನೀಡಲು ಹೋಗುವುದಿಲ್ಲ. ಅಶೋಕ್ ರೈ ಇವತ್ತು ಬ್ರಹ್ಮಕಲಶ ಮಾಡಿದ್ದರೆ.., ಕಂಬಳ ಮಾಡಿದ್ದರೆ ಅದು ರೈತಾಪಿ ವರ್ಗದ ನೆರವಿಗಾಗಿ ಮಾಡುವ ಕಾರ್ಯ. ರೈತಾಪಿ ವರ್ಗಕ್ಕೆ ನೆರವು ನೀಡುವ ಉದ್ದೇಶವೇ ವಿನಹ ರಾಜಕೀಯದಲ್ಲಿ ಉದ್ದೇಶದಿಂದ ಈ ರೀತಿಯ ಯಾವುದೇ ಕಾರ್ಯ ನಿರ್ವಹಿಸಿಲ್ಲ’ ಎಂದು ಅವರು ಹೇಳಿದರು.