ಲವ್ ಮಾಕ್ ಟೇಲ್ ಖ್ಯಾತಿಯ ನಟಿ ಮಿಲನ ನಾಗರಾಜ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ವೇಳೆ ಅಭಿಮಾನಿಗಳಿಗೆ ಮಿಲನ ನಾಗರಾಜ್ ದಂಪತಿ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಹೌದು…ಇತ್ತೀಚೆಗಷ್ಟೆ ಲವ್ ಮಾಕ್ ಟೇಲ್2 ಚಿತ್ರದ ‘ಕನಸಾದೆ ನೀನು ನನಸಾದೆ ನೀನು’ ಹಾಡು ರಿಲೀಸ್ ಮಾಡಿದ್ದ ಚಿತ್ರತಂಡ ಇದೀಗ 2ನೇ ಹಾಡಿನ ರಿಲೀಸ್ ಡೇಟ್ ಕೂಡ ಘೋಷಿಸಿದೆ.ಈ ವಿಶೇಷ ಉಡುಗರೆಯೊಂದಿಗೆ ಮಿಲನ ನಾಗರಾಜ್ ಗೆ ಶುಭಾಷಯ ತಿಳಿಸಿದ ಡಾರ್ಲಿಂಗ್ ಕೃಷ್ಣ ಅವರು, ಲವ್ ಮಾಕ್ ಟೇಲ್ 2ರ ಹಾಡು ‘ಈ ಪ್ರೇಮ ನಿನ್ನ ಕೊಡುಗೆ ನನಗೆ, ಈ ಪ್ರೇಮ ನೀನಿರಲು ಬಳಿಗೆ’ ಮೇ 1ರಂದು ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ.
https://www.instagram.com/p/COEkAhXAGDB/?utm_source=ig_web_copy_link
ಈ ಚಿತ್ರದ ಹಾಡುಗಳನ್ನು ನಕುಲ್ ಅಭ್ಯಂಕರ್ ಅವರು ರಚಿಸಿದ್ದು, ಮೊದಲ ಹಾಡು ಈಗಾಗಲೇ ಜನರ ಮನಗೆದಿದ್ದು, 2ನೇ ಹಾಡಿಗಾಗಿ ಜನರು ಕಾತುರದಿಂದಿದ್ದಾರೆ.