ಪುತ್ತೂರು ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಆರೋಪಿಯನ್ನು ಬಂಧಿಸಿದ್ದು, ಮತ್ತೋರ್ವ ಪರಾರಿಯಾದ ಘಟನೆ ನಡೆದಿದೆ.
ಪುತ್ತೂರು ಮೂಲದ ಅಬೂಬಕರ್ ಸಿದ್ಧಿಕ್ ಬಂಧಿತ ಆರೋಪಿ. ಸುಳ್ಯ ಮೂಲದ ಸರ್ಫುದ್ದಿನ್ ಪರಾರಿಯಾದಾತ.
ಆರೋಪಿಯಿಂದ 29.600 ರೂ. ಮೌಲ್ಯದ 674 ಗ್ರಾಂ. ಗಾಂಜಾ ಹಾಗೂ ಒಂದು ಕಾರು, ಒಂದು ಮೊಬೈಲ್ ಅನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.ಆರೋಪಿ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನಿರ್ದೇಶನದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಡಾ.ವೀರಯ್ಯ ಹಿರೇಮಠ, ಮತ್ತು ಪುತ್ತೂರು ಗ್ರಾಮಾಂತರ ಪೊಲೀಸ್ ನಿರೀಕ್ಷಕರಾದ ಮಂಜುನಾಥ್, ಎಂ. ರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪಿ.ಎಸ್.ಐ ರವರಾದ ಶ್ರೀನಾಥ್ ರೆಡ್ಡಿ ಮತ್ತು ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿಗಳಾದ ಎಎಸ್‌ಐ ಮುರುಗೇಶ್, ವರ್ಗೀಸ್, ದೇವರಾಜ್, ಅದ್ರಾಮ್,ಪ್ರವೀಣ್ ರೈ, ಹರೀಶ್, ಶಿವಾನಂದ, ಹರ್ಷಿತ್ ರವರ ತಂಡ ಪಾಲ್ಗೊಂಡಿದ್ದರು.
ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.