ಬೆಳ್ತಂಗಡಿ : ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವ ನಡುವೆ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಎಂಬಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ರವರ ನೇತೃತ್ವದಲ್ಲಿ ಸಾಮೂಹಿಕ ವಿವಾಹವೊಂದು ನಡೆಯುತ್ತಿದ್ದು, ವೀಕೆಂಡ್ ಕರ್ಫ್ಯೂ ಗೆ ಜನ ಕ್ಯಾರೇ ಎಂದಿಲ್ಲ.
ವೀಕೆಂಡ್ ಕರ್ಫ್ಯೂ ಅನ್ನು ಗಾಳಿಗೆ ತೂರಿರುವಂತ ಜನರು ಸಾಮಾಜಿಕ ಅಂತರವಿಲ್ಲದೇ,ಮಾಸ್ಕ್ ಕೂಡ ಧರಿಸದೆ ಗುಂಪು ಗುಂಪಾಗಿ ಮದುವೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದು ಕಂಡು ಬಂದಿದ್ದು,ಕೊರೊನಾ ಹರಡುವ ಆತಂಕ ಸೃಷ್ಟಿಯಾಗಿದೆ.