ಪುತ್ತೂರು: ಮಾರಾಟಕ್ಕೆಂದು ಮಾದಕ ವಸ್ತುಗಳನ್ನಿಟ್ಟುಕೊಂಡಿದ್ದ ವ್ಯಕ್ತಿಯೋರ್ವನನ್ನು ಹಾಗೂ ಆತನಿಗೆ ಮಾದಕ ವಸ್ತುಗಳನ್ನು ನೀಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಸೇಡಿಯಾಪು ಬಸ್ ನಿಲ್ದಾಣದ ಬಳಿ ನಡೆದಿದೆ.
ಬೆಳ್ತಂಗಡಿ ಇಳಂತಿಲ, ನೇಜಿಕಾರು-ಅಂಬೊಟ್ಟು ನಿವಾಸಿ ಮೊಹಮ್ಮದ್ ಶಾಫಿ (30) ಬಂಧಿತ ಆರೋಪಿ.

ಪುತ್ತೂರು ನಗರ ಠಾಣಾ ಪೊಲೀಸರು ಉಪನಿರೀಕ್ಷಕರಾದ ಶ್ರೀಕಾಂತ್ ರಾಥೋಡ್ ಮತ್ತು ಸಿಬ್ಬಂದಿಗಳಿಗೆ ಕೋಡಿಂಬಾಡಿ ಗ್ರಾಮದ ಸೇಡಿಯಾಪು ಬಸ್ ನಿಲ್ದಾಣ ವ್ಯಕ್ತಿಯೋರ್ವ ಮಾದಕ ವಸ್ತುವನ್ನಿಟ್ಟುಕೊಂಡು ಅನುಮಾನಸ್ಪದವಾಗಿ ನಿಂತುಕೊಂಡಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ವೇಳೆ ಮೇಲಾಧಿಕಾರಿರವರಿಗೆ ತಿಳಿಸಿ ಅವರ ಅನುಮತಿಯನ್ನು ಪಡೆದು ಠಾಣಾ ಸಿಬ್ಬಂದಿಗಳನ್ನು ಜೊತೆಯಾಗಿ ಇಲಾಖಾ ವಾಹನದಲ್ಲಿ ಐ.ಓ ಕಿಟ್ ಹಾಗೂ ತೂಕಮಾಪನ ಯಂತ್ರವನ್ನು ಇಟ್ಟುಕೊಂಡು ಠಾಣೆಯಿಂದ ಹೊರಟು ಮಾಹಿತಿ ಬಂದ ಸ್ಥಳವಾದ ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ಸೇಡಿಯಾಪು ಬಸ್ ನಿಲ್ದಾಣದ ಬಳಿ ತಲುಪಿದಾಗ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಅನುಮಾನಸ್ಪದವಾಗಿ ಮರದ ಬದಿಯಲ್ಲಿ ನಿಂತುಕೊಂಡಿರುವುದು ಕಂಡು ಬಂದಿದ್ದು, ಈ ವೇಳೆ ಅಧಿಕಾರಿಗಳು ವ್ಯಕ್ತಿಯ ಬಳಿ ಹೋದಾಗ ಆ ವ್ಯಕ್ತಿಯು ಸಮವಸ್ತ್ರದಲ್ಲಿದ್ದ ಅಧಿಕಾರಿಗಳನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದಾಗ ಸಿಬ್ಬಂದಿಗಳನ್ನು ಆತನನ್ನು ವಶಕ್ಕೆ ಪಡೆದಿದ್ದು, ಆತನನ್ನು ವಿಚಾರಿಸಿದಾಗ ಆತನ ಮೋಟಾರ್ ಸೈಕಲ್ ನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ತಂದು ಮರದಡಿಯಲ್ಲಿ ಇಟ್ಟು ಮಾರಾಟ ಮಾಡುವರೇ ಗಿರಾಕಿಗೆ ಕಾಯುತ್ತಿರುವುದಾಗಿ ತಿಳಿಸಿರುತ್ತಾನೆ.
ಪಂಚರ ಸಮಕ್ಷಮದಲ್ಲಿ ಮೊಹಮ್ಮದ್ ಶಾಫಿ ತಿಳಿಸಿದ ಮರದ ಬುಡದಲ್ಲಿ ಪರಿಶೀಲನೆ ನಡೆಸಲಾಗಿ ಆನಾವು ಮತ್ತು ಮಾವಿನ ಮರಗಳ ಮದ್ಯದಲ್ಲಿ ಪಾರದರ್ಶಕ ಪ್ಲಾಸ್ಟಿಕ್ ಚೀಲದಲ್ಲಿದ್ದು, ಅದನ್ನು ಪರಿಶೀಲನೆ ನಡೆಸಲಾಗಿ ಅದರೊಳಗೆ ಗಾಂಜಾದ ಒಣಗಿದ ಹೂ, ಎಲೆ, ಮೊಗ್ಗು ಮತ್ತು ಬೀಜಗಳು ಇರುವುದು ಕಂಡು ಬಂದಿದ್ದು ಇದರ ದಟ್ಟವಾದ ವಾಸನೆಯಿಂದ ಮಾದಕ ವಸ್ತುವಾದ ಗಾಂಜಾ ಎಂದು ಖಚಿತವಾಗಿರುತ್ತದೆ.
ಸದ್ರಿ ಮಾದಕ ವಸ್ತುವನ್ನು ಎಲ್ಲಿಂದ ತಂದಿರುವುದಾಗಿ ವಿಚಾರಿಸಿದಾಗ ಅದನ್ನು ಕಬಕ ಗ್ರಾಮದ ಮುನ್ನಾ (ರಫೀಕ್) ಎಂಬುವನು ಕಬಕದಲ್ಲಿ ಮಾದಕ ವಸ್ತುವನ್ನು ನೀಡಿರುವುದಾಗಿ ತಿಳಿಸಿರುತ್ತಾನೆ.
ತೂಕಮಾಪನದಿಂದ ಪ್ಲಾಸ್ಟಿಕ್ ಚೀಲದಲ್ಲಿದ್ದ ಗಾಂಜಾವನ್ನು ತೂಕ ಮಾಡಲಾಗಿ 190 ಗ್ರಾಂ ಆಗಿರುತ್ತದೆ. ಇದರ ಅಂದಾಜು ಒಟ್ಟು ಮೌಲ್ಯ 6,000/- ಆಗಬಹುದು. ಹಾಗೂ ಆರೋಪಿ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ನ್ನು ಪರಿಶೀಲಿಸಲಾಗಿ ಇದು ಕಪ್ಪು-ಹಸಿರು ಬಣ್ಣದ ಯಮಹಾ ಕಂಪನಿಯ FZ-S ಮೋಟರ್ ಸೈಕಲ್ ಆಗಿರುತ್ತದೆ.
ಸದ್ರಿ ಮೋಟರ್ ಸೈಕಲ್ ಮತ್ತು ಗಾಂಜಾವನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಸ್ವಾಧೀನಪಡಿಸಿದ ಮೋಟಾರ್ ಸೈಕಲ್‌ನ ಅಂದಾಜು ಮೌಲ್ಯ ರೂ 50,000/- ಆಗಬಹುದಾಗಿದೆ.
ಈ ಬಗ್ಗೆ ಠಾಣೆಯಲ್ಲಿ ಠಾಣಾ ಅ.ಕ್ರ: 20/2023 ಕಲಂ: 8 (C ),20 (b)(ii)(A) NDPS ಆಕ್ಟ್ ಪ್ರಕರಣ ದಾಖಲಾಗಿದೆ..


























