ಪುತ್ತೂರು: ಶಾಸಕ ಸಂಜೀವ ಮಠಂದೂರು ರವರ ನೇತೃತ್ವದಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಉದ್ಯೋಗ, ವಿದ್ಯೆ, ವ್ಯಾಪಾರ ಹಾಗೂ ಇನ್ನಿತರ ಉದ್ದೇಶದಿಂದ ನೆಲೆಸಿರುವ ಪುತ್ತೂರು ವಿಧಾನ ಸಭಾ ಕ್ಷೇತ್ರದ ನಿವಾಸಿಗಳಿಗಾಗಿ ‘ಸ್ನೇಹ ಮಿಲನ’ ಕಾರ್ಯಕ್ರಮವನ್ನು ಮಾ.25 ರಂದು ಆಯೋಜಿಸಲಾಗಿದೆ.
ಮಾ.25 ರಂದು ಬೆಳಿಗ್ಗೆ 7 ಗಂಟೆಯಿಂದ ಬೆಂಗಳೂರಿನ ವಿಜಯನಗರದ ಬಂಟರ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರಿನಲ್ಲಿರುವ ಪುತ್ತೂರಿಗರನ್ನು ‘ಸ್ನೇಹ ಮಿಲನ’ದ ಮೂಲಕ ಒಟ್ಟಾಗಿಸುವ ಕಾರ್ಯಕ್ರಮ ಇದಾಗಿದೆ.