ಪುತ್ತೂರು: ರಾಜ್ಯ ಯುವ ಕಾಂಗ್ರೆಸ್ ವಕ್ತಾರರಾಗಿ ಶ್ರೀಪ್ರಸಾದ್ ಪಾಣಾಜೆ ರವರು ನೇಮಕಗೊಂಡಿದ್ದಾರೆ.
ಪ್ರಸ್ತುತ ಶ್ರೀಪ್ರಸಾದ್ ರವರು ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪುತ್ತೂರು ತಾಲೂಕಿನ ಪಾಣಾಜೆಯ ನಡುಗಟ್ಟ ನಿವಾಸಿಯಾಗಿರುವ ಶ್ರೀಪ್ರಸಾದ್ ಅವರು ಖಾಸಗಿ ಶಾಲೆಯಲ್ಲಿ 8 ವರ್ಷಗಳ ಕಾಲ ಶಿಕ್ಷಕವೃತ್ತಿ ಮಾಡಿದ್ದರು. ಬಳಿಕ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷಸ್ಥಾನ ಅಲಂಕರಿಸಿದ್ದರು. ಇದೀಗ ಕರ್ನಾಟಕ ಪ್ರದೇಶ ಯವ ಕಾಂಗ್ರೆಸ್ ಸಮಿತಿಯ ರಾಜ್ಯ ವಕ್ತಾರರಾಗಿ ಇವರನ್ನು ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಅವರು ನೇಮಕ ಮಾಡಿ ಆದೇಶಿಸಿದ್ದಾರೆ.
ಶ್ರೀಪ್ರಸಾದ್ ಅವರು ಪಾಣಾಜೆ ಲಯನ್ಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ, ವಿದ್ಯಾಶ್ರೀ ಚಾರಿಟೇಬಲ್ ಟ್ರಸ್ಟ್ ಸಂಚಾಲಕರಾಗಿ, ಯಾದವ ಸಭಾ ತಾಲೂಕು ಸಮಿತಿಯ ಅಧ್ಯಕ್ಷರಾಗಿಸೇವೆ ಸಲ್ಲಿಸುತ್ತಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಯಂಗ್ ಇಂಡಿಯಾ ಕೆ ಬೊಲೊ ಕಾರ್ಯಕ್ರಮದಲ್ಲಿ ತನ್ನ ಭಾಷಣದ ಮೂಲಕ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಮನಗೆದ್ದಿದ್ದರು..