ಪುತ್ತೂರು: ಮನೆಯಲ್ಲಿ ಪತ್ನಿ ಮತ್ತು ಮಗು ಇರುವ ವೇಳೆ ನಮ್ಮ ಸ್ವಾಧೀನದಲ್ಲಿರುವ ಕೃಷಿ ಜಾಗಕ್ಕೆ ಬಂದು ಜೆಸಿಬಿ ಮೂಲಕ ಕೃಷಿಯನ್ನು ಹಾಳು ಮಾಡಿರುವುದಾಗಿ ಆರೋಪಿಸಿ ವ್ಯಕ್ತಿಯೋರ್ವರು ತಹಶೀಲ್ದಾರ್ ಹಾಗೂ ಪುತ್ತೂರು ನಗರ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ಸೂತ್ರಬೆಟ್ಟು ನಿವಾಸಿ ಅರುಣ್ ಕುಮಾರ್ ಎಂಬವರು ಸುಲೋಚನಾ ದಿಲೀಪ್ ಶೆಟ್ಟಿ ರವರ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.

ಅರುಣ್ ರವರು ಪುತ್ತೂರಿನ ಸೂತ್ರಬೆಟ್ಟುವಿನಲ್ಲಿ ವಾಸವಾಗಿದ್ದು, ಉಪ್ಪಿನಂಗಡಿ ಹೋಬಳಿ, ಚಿಕ್ಕಮುಡ್ನೂರು ಗ್ರಾಮದ ಸ.ನಂ. 167/9 ರಲ್ಲಿ 3.16 ಎಕ್ರೆ ಸರಕಾರಿ ಸ್ಥಳ, ಇದರಲ್ಲಿ ಸ್ವಾಧೀನ 63 ಸೆಂಟ್ಸ್ ಎನ್.ಸಿ.ಆರ್.ಎಸ್.ಆರ್ 327/92.99 ರಂತೆ ದರ್ಖಾಸು ಭೂಮಿ ಅರುಣ ತಾಯಿ ಹೆಸರಿಗೆ ಸೇರ್ಪಡೆಗೊಂಡಿದ್ದು, ಅದು ಅಲ್ಲದೆ ಅರುಣ ಹೆಸರಿಗೆ 167/9 28 ಸೆಂಟ್ಸ್ ಜಾಗಕ್ಕೆ ಉಪ್ಪಿನಂಗಡಿ ಹೋಬಳಿಗೆ ಸಂಖ್ಯೆ ಬಿಎಚ್ ಮ್ 3981ಎ51872ಚ38 ಅರ್ಜಿಯನ್ನು ಕೂಡ ಸಲ್ಲಿಸಿದ್ದೇವೆ.
ಈ ಜಾಗವು ಹಲವು ವರ್ಷದಿಂದ ಸ್ವಾಧೀನದಲ್ಲಿದ್ದು, ಸದರಿ ಜಾಗದಲ್ಲಿ ಕೃಷಿಯನ್ನು ಮಾಡಿದ್ದು, ಸದರಿ ಜಾಗದಲ್ಲಿ ವಾಸದ ಮನೆ ಕೂಡ ಇರುತ್ತದೆ. ಅರುಣ್ ರವರ ತಾಯಿ ತಾರ ರವರ ಹೆಸರಿಗೆ ಅಕ್ರಮ-ಸಕ್ರಮ ಕಾಯ್ದೆಯಡಿ 3 ಸೆಂಟ್ಸ್ ಜಾಗ ಮಂಜೂರಾಗಿದ್ದು, ಉಳಿದ ಜಾಗ 60 ಸೆಂಟ್ಸ್ ದರ್ಖಾಸು ಕೃಷಿ ಭೂಮಿ ಎಂದು ಆದೇಶ ಕೊಡಲಾಗಿದೆ. ಹಾಗೆ ಮಂಜೂರಾತಿಗೆ ಅರ್ಜಿಯನ್ನು ಕೂಡ ಸಲ್ಲಿಸಲಾಗಿದೆ.

ಸದರಿ ಜಾಗವನ್ನು ನನಗೆ ಮತ್ತು ನನ್ನ ಹೆಂಡತಿ, ಮಕ್ಕಳಿಗೆ ಮುಂದಿನ ಜೀವನಕ್ಕೆ ದಾರಿದೀಪವಾಗಲಿ ಎಂಬ ವಿಚಾರಕ್ಕೆ ನಮ್ಮದಾಗಿರುತ್ತದೆ., ಆದುದರಿಂದ ಸದರಿ ಜಾಗದಲ್ಲಿ 28 ಅಡಿಕೆ, 10 ತೆಂಗಿನ ಗಿಡ, ಬಾಳೆಗಿಡ, ಕಬ್ಬು, ಹೂವಿನ ಗಿಡ, ಗೆಣಸು, ಮನೆಯ ಅಗತ್ಯ ಸಾಮಾಗ್ರಿಗಳು, ಕಟ್ಟಿಗೆ ಇದ್ದವು. ಈಗ ಸ್ವಾಧೀನ ಮತ್ತು ಅನುಭೋಗದಲ್ಲಿರುವ ಜಾಗದಲ್ಲಿ ಸುಲೋಚನ ದಿಲೀಪ್ ಶೆಟ್ಟಿ ಎಂಬವರು ಸರಕಾರಿ ಜಾಗ ಕಬಲಿಸುವ ಉದ್ದೇಶದಿಂದ ಆಗಾಗ್ಗೆ ಜನರನ್ನು ಕರೆದುಕೊಂಡು ಬಂದು ಅಕ್ರಮ ಪ್ರವೇಶ ಮಾಡಿ ತೊಂದರೆ ಕೊಡುತ್ತಿದ್ದು, ಇದ್ದರಿಂದ ನನ್ನ ತಾಯಿ ಕೂಡ ಮಾನಸಿಕ ಹಿಂಸೆಗೆ ಒಳಗಾಗಿದ್ದರು. ಈಗ ಈ ಮನೆಯಲ್ಲಿ ನನ್ನ ಪತ್ನಿ ಹಾಗೂ 6 ತಿಂಗಳ ಮಗು ಇರುವಾಗ ನಮ್ಮ ಸ್ವಾಧೀನದಲ್ಲಿರುವ ಜಾಗಕ್ಕೆ ಬಂದು ಕೃಷಿಯನ್ನು ಜೆಸಿಬಿ ಮೂಲಕ ನೆಲಸಮ ಮಾಡಿದ್ದಾರೆ. ಇದಕ್ಕೆ ನಮಗೆ ತೆರವಿಗೆ ಯಾವುದೇ ಪೊಲೀಸ್ ನೋಟಿಸ್ ನೀಡಿರುವುದಿಲ್ಲ.

ನಷ್ಟ ಉಂಟು ಮಾಡಿರುವ ಹಿನ್ನೆಲೆ 3 ಲಕ್ಷ ರೂ. ಮಾನನಷ್ಟ ಮತ್ತು ಕೃಷಿ ಹಾನಿಗೆ ಪರಿಹಾರ ಕೊಡಿಸಬೇಕಾಗಿ ಹಾಗೂ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ.

