ಪುತ್ತೂರು : ಇಲ್ಲಿನ ದರ್ಬೆ ಶ್ರೀರಾಮ ಸೌಧದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ನೂತನ ಈಶ್ವರ ಮಂಗಲ ಶಾಖೆಯ ಉದ್ಘಾಟನೆಯು ಎ.27ರಂದು ಈಶ್ವರಮಂಗಲದ ಹಿರಾ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಶಾಸಕ ಸಂಜೀವ ಮಠಂದೂರುರವರು ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎನ್.ಜಗನ್ನಾಥ ರೈ ಮಾದೋಡಿರವರು ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ಎಸ್.ಬಿ.ಜಯರಾಮ ರೈ ಬಳಜ್ಜರವರು ಭದ್ರತಾ ಖಜಾನೆ ಉದ್ಘಾಟಿಸಲಿದ್ದಾರೆ. ಹನುಮಗಿರಿ ಶ್ರೀ ಪಂಚಮುಖಿ ದೇವಸ್ಥಾನದ ಮಹಾಪೋಷಕ ಜಿ.ಕೆ.ಮಹಾಬಲೇರ್ಶವರ ಭಟ್‌ರವರು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ.
ಅತಿಥಿಗಳಾಗಿ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ನಾಯಕ್, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ, ಅಧ್ಯಕ್ಷ ರಮೇಶ್ ರೈ ಸಾಂತ್ಯ, ಈಶ್ವರಮಂಗಲ ಹಿರಾ ಕಾಂಪ್ಲೇಕ್ಸ್‌ನ ಮಾಲಕ ಅಬ್ದುಲ್ ಖಾದರ್‌ರವರುಗಳು ಭಾಗವಹಿಸಲಿದ್ದಾರೆ ಎಂದು ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎನ್.ಜಗನ್ನಾಥ ರೈ ಮಾದೋಡಿ, ಉಪಾಧ್ಯಕ್ಷ ಎ. ಲಕ್ಷ್ಮೀನಾರಾಯಣ ಶೆಟ್ಟಿ ಅರಿಯಡ್ಕ, ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲು, ಈಶ್ವರಮಂಗಲ ಶಾಖಾ ಮೇನೇಜರ್ ಸುಮಂತ್ ರೈ ಹಾಗೂ ಸಿಬ್ಬಂದಿ ಐಶ್ವರ್ಯ ರೈರವರು ತಿಳಿಸಿದ್ದಾರೆ.