ನೆಲ್ಯಾಡಿ : ಒಮ್ನಿ ಹಾಗೂ ಐ 20 ಕಾರಿನ ನಡುವೆ ಡಿಕ್ಕಿ ಸಂಭವಿಸಿ ಒಮ್ನಿಯಲ್ಲಿದ್ದ ನಾಲ್ವರು ಗಾಯಗೊಂಡಿರುವ ಘಟನೆ ಕೊಕ್ಕಡ ಸಮೀಪದ ಕಾಪಿನಬಾಗಿಲು ಎಂಬಲ್ಲಿ ಎ. 26 ರಂದು ನಡೆದಿದೆ.
ಘಟನೆಯಲ್ಲಿ ಒಮ್ನಿಯಲ್ಲಿದ್ದ ಗೋಳಿತ್ತೊಟ್ಟು ಪಾದೆ ನಿವಾಸಿಗಳಾದ ಸುನಂದಾ, ಪದ್ಮಾವತಿ, ರಿತ್ವಿಕ್ ಶೆಟ್ಟಿ ಹಾಗೂ ಗುಲಾಬಿ ಎಂಬವರು ಗಾಯಗೊಂಡಿದ್ದಾರೆ. ಒಮ್ನಿ ಚಾಲಕ ಜಯರಾಮ ಶೆಟ್ಟಿ ಹಾಗೂ ಐ 20 ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಒಮ್ನಿ ಗೋಳಿತ್ತೊಟ್ಟುವಿನಿಂದ ಶಿಶಿಲಕ್ಕೆ ತೆರಳುತ್ತಿದ್ದು ಕೊಪ್ಪ ನಿವಾಸಿಗಳಿದ್ದ ಐ 20 ಕಾರು ಧಮ೯ಸ್ಥಳದಿಂದ ಸುಬ್ರಹ್ಮಣ್ಯ ಕ್ಕೆ ತೆರಳುತಿತ್ತು. ನೆಲ್ಯಾಡಿ ಹೊರಠಾಣಾ ಹೆಡ್ ಕಾನ್ಸ್ಟೇಬಲ್ ಸಂಗಯ್ಯ ಕಾಳೆಯವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.