ಬಂಟ್ವಾಳ : ಡೆಲಿವರಿ ಬಾಯ್ ಯುವಕನೋರ್ವನಿಗೆ ಮುಸ್ಲಿಂ ಯುವಕರು ಹಲ್ಲೆ ನಡೆಸಿದ ಘಟನೆ ಬಂಟ್ವಾಳ ಕೆಳಗಿನ ಪೇಟೆಯಲ್ಲಿ ನಡೆದಿದೆ.

ಗುರುಪ್ರಸಾದ್ ಎಂಬ ಯುವಕ ಫ್ಲಿಪ್ ಕಾರ್ಟ್ ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಈತ ಬಂಟ್ವಾಳದ ಕೆಳಗಿನ ಪೇಟೆಗೆ ಬಳಿ ಡೆಲಿವರಿ ನೀಡಲು ತೆರಳಿದಾಗ ಪಾರ್ಕಿಂಗ್ ವಿಚಾರಕ್ಕೆ ಜಗಳ ನಡೆದು ಮುಸ್ಲಿಂ ಯುವಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ಘಟನೆಯಲ್ಲಿ ಗಾಯಗೊಂಡ ಗುರುಪ್ರಸಾದ್ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಹಿಂದೂ ಯುವಕನಿಗೆ ಹಲ್ಲೆ ನಡೆಸಿದ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದರು. ಅದೇ ರೀತಿ ಹಲ್ಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ..