ಮಂಗಳೂರು: ನಗರದ ಪಂಪ್ ವೆಲ್ ಫ್ಲೈ ಓವರ್ ಮೇಲೆ ಲಾಕ್ ಡೌನ್ ಆಗಲಿ ಎಂದು ಅವಹೇಳನಕಾರಿಯಾಗಿ ಇಂಗ್ಲಿಷ್ ನಲ್ಲಿ ಬರೆದಿರುವ ಗೋಡೆ ಬರಹ ಪ್ರಕರಣದ ಸಲುವಾಗಿ ಇಬ್ಬರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಸಿಸಿ ಟಿವಿ ಫೂಟೇಜ್ ಆಧಾರದ ಮೇಲೆ ಮಂಗಳೂರು ನಗರದ ಸಂತ ಅಲೋಶಿಯಸ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಇಬ್ಬರು, ಲಾಕ್ ಡೌನ್ ಆಗಬೇಕು ಮತ್ತು ಅವಹೇಳನಕಾರಿ ಪದಗಳಲ್ಲಿ ಗೋಡೆಯಲ್ಲಿ ಬರೆದಿರೋದು ತಾವೇ ಎಂದು ಒಪ್ಪಿಕೊಂಡಿದ್ದು, ಪರೀಕ್ಷೆ ಮುಂದೂಡಬೇಕೆಂಬ ಉದ್ದೇಶದಿಂದ ಈ ರೀತಿ ಬರೆದಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.