ಇಂದಿನ ಮಕ್ಕಳು ಮುಂದೆ ಬಾಳು ಬಾಳಬೇಕಾದವರು. ಬಾಳಿಗಾಗಿ ಧನ ಕನಕಗಳನ್ನು ನೀಡುತಿದ್ದೇವೆಯೇ ಹೊರತು, ಬದುಕುವ ಜ್ಞಾನ ಕೊಡುತಿದ್ದೇವೆಯೇ ಎಂಬುದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳೋಣ..!?? ಮುದ್ದು ಮನಸುಗಳ ಅನಂತ ಸಮಯ ವ್ಯಯಿಸುವ ಸ್ಥಳ ಮನೆ ಬಿಟ್ಟರೆ ಎರಡನೆಯದು ಶಾಲೆ. ಈ ಎರಡು ಸ್ಥಳಗಳಲ್ಲೂ ಹಿರಿ ಭಾವದ ನಾವು ಮಾನಸಿಕ, ಭೌತಿಕ ಹಿಂಸೆ ನೀಡುತಿದ್ದೇವೆ ಎಂದು ನಿಮಗನಿಸುತ್ತಿಲ್ಲವೇ? ಇದು ಎರಡೂ ಸ್ಥಳಗಳೂ ನಮ್ಮ ವಿದ್ಯಾರ್ಥಿಗಳಿಗೆ ಭಯ ಉತ್ಪಾದಕ ಕ್ಷೇತ್ರಗಳೆಂಬಷ್ಟು ಅಭಯ ನೀಡಿಲ್ಲವೇ?ನಾವು. ಮನೆಯಲ್ಲಿ ಹೋಮ್ ವರ್ಕ್, ಶಾಲೆಯಲ್ಲಿ ಮಾರ್ಕ್ಸ್ ವಾದ. ಹಾಗಿದ್ದರೆ ಮಗುವಿನ ಮನಸಿಗೆ ಸಾಂತ್ವನ ಎಲ್ಲಿಂದ ಹೇಳಿ. ರಜೆ ಬಂದರೆ ನಮಗೆ ಅಡ್ಡಿಯಾಗದಿರುವಂತೆ ಬೇಸಿಗೆ ಶಿಬಿರ ಆಸರೆಯಾಗಿದೆ.
ಅಜ್ಜಿ ಮನೆಯ ಮಾನಸಿಕ ಸೌಂದರ್ಯ ಅಜ್ಜ ಆಜ್ಜಿಯಂತೆ ಮೂಲೆ ಸೇರಿದೆ. ಹಾಗೊಂದು ಸಂತಸದ ಬದುಕಿದೆ ಎನ್ನುವುದನ್ನೇ ಕಂದಮ್ಮಗಳಿಗೆ ವಂಚಿಸಿದ ಪಾಪಿಗಳಾಗಿ ಬಿಟ್ಟಿದ್ದೇವೆ ನಾವು . ಅವುಗಳಿಗೆ ನಾವು ತೋರಿಸಿದ್ದು,ಕೇಳಿಸಿದ್ದು ಮನೆಯ ಮೂಲೆಯಲ್ಲಿಯ ಮೂರ್ಖರ ಪೆಟ್ಟಿಗೆಯ ಬೀಬತ್ಸ ದೃಶ್ಯ. ಪಕ್ಕದ ಮನೆಯ ಕಾಯಿಲೆಯೆಂಬ ಪೈಪೋಟಿಯ ಕೋರ್ಸ್ ಗಳು ನಮ್ಮ ಮನೆಯ ಮಗುವಿಗೂ ತಟ್ಟಿಸಿ ಬಿಡುತ್ತೇವೆ. ಮಗುವಿನಲ್ಲಿ ಒಮ್ಮೆಯಾದರೂ ಸಾಧನೆಗಾಗಿ ಒಂದಷ್ಟು ಸಮಯ ಕೊಡಿರೆಂದು ಹೇಳಿಸಿದ್ದೀರಾ? ಶಾಲೆಯಲ್ಲಿ ನಾವು ಪ್ರಶ್ನಿಸಲು ಕಲಿಸಿದ್ದೀವಾ? ಒಮ್ಮೆ ಪ್ರಶ್ನಿಸಿಕೊಳ್ಳೋಣ? ಒಮ್ಮೊಮ್ಮೆ ಯೋಚಿಸಬೇಕಾಗುತ್ತದೆ ನಮ್ಮ ಮಕ್ಕಳನ್ನು ಷೋಕೇಸಿನ ಬೊಂಬೆಯಗಿಸುತ್ತಿದ್ದೇವೆಯೇ,ಇಲ್ಲ ಜೀವಂತ ಯುವ ಪೀಳಿಗೆಯನ್ನು ಸೃಷ್ಟಿಯಾಗಿಸುತ್ತಿದ್ದೇವೆಯೇ ಎಂದು. ಮಕ್ಕಳ ನಡೆನುಡಿಗಳನ್ನು ಅಭಿವೃದ್ಧಿಗೊಳಿಸಲು ಸಾಧಕರ ಜೊತೆ ಬಿಟ್ಟು ಸಾಧಕರನ್ನಾಗಿಸಬೇಕೆ ಹೊರತು ವಿನಾ ಪ್ರಮಾಣ ಪತ್ರದ ಭಯಕ್ಕೆ ಉಪಯೋಗಕ್ಕೆ ಬಾರದ ಕುರುಡು ಹೊರೆ ಹೊರಿಸಬೇಕೆ ಹೇಳಿ. ಆದ್ದರಿಂದ ಮಕ್ಕಳಲ್ಲಿ ಬೇಕು ಎಂಬ ಧಾಹ ಹುಟ್ಟಿಸಿ ಬಿಡಿ. ಮುಂದಿನದ್ದನ್ನು ಮಕ್ಕಳೇ ಯೋಚಿಸುವ ಜವಾಬ್ದಾರಿ ನೀಡಿ. ಮಗು ಬೆಳೆಯುತ್ತದೆ ಸಾಧನೆಯ ಹಾದಿ ಹಿಡಿಯುತ್ತದೆ. ಮನೆಯಮಗುವಿನ ಯೋಚನೆಯ ಹಾದಿಗೆ ಭಯದ ತಡೆಯೊಡ್ಡದೆ ಕ್ರಿಯಾಶೀಲ ಕ್ರಿಯೆಯನ್ನು ಸಂತಸದಿಂದ ಒಪ್ಪಿಕೊಂಡು ಪ್ರತಿಕ್ರಿಯಿಸಿರಿ.
ನೀವೊಬ್ಬ ಪ್ರೀತಿಯ ಅಪ್ಪ ಅಮ್ಮ ಎಂಬುದನ್ನು ಆನಂದಿಸಿ ಬದುಕಲು ಎಡೆ ಮಾಡಿ ಕೊಡಬಹುದೇ..!!
🖊️ರಾಧಾಕೃಷ್ಣ ಎರುಂಬು