ಪುತ್ತೂರು : ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಯವರ ಚುನಾವಣಾ ಕಚೇರಿಗೆ ಕಾಂಗ್ರೆಸ್ ಚುನಾವಣಾ ವೀಕ್ಷಕರಾದ ಚರಣ್ ಸಿಂಗ್ ಸಪ್ರಾ ಹಾಗೂ ಮುಂಬೈ ಕಾಂಗ್ರೆಸ್ ಮುಖಂಡರಾದ ಜಯಪ್ರಕಾಶ್ ಆರ್. ಶೆಟ್ಟಿ ರವರು ಭೇಟಿ ನೀಡಿದರು.

ಮೇ. 10 ರಂದು ನಡೆಯುವ ವಿಧಾನಸಭಾ ಚುನಾವಣೆಗೆ
ಸಂಬಂಧಿಸಿದಂತೆ ಅನುಸರಿಸಬೇಕಾದ ಕಾರ್ಯ ತಂತ್ರಗಳ ಬಗ್ಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ದರ್ಬೆಯಲ್ಲಿರುವ ಚುನಾವಣಾ ಕಛೇರಿಯಲ್ಲಿ ಮಾತುಕತೆ ನಡೆಯಿತು.
ಎಐಸಿಸಿ ಯಿಂದ ವೀಕ್ಷಕರಾಗಿ ನೇಮಕಗೊಂಡ ಮುಂಬೈ ವಲಯದ ಕಾಂಗ್ರೆಸ್ ನ ಮಾಜಿ ಪರಿಷತ್ ಸದಸ್ಯ ಚರಣ್ ಸಿಂಗ್ ಸಪ್ರ ಮತ್ತು ಮುಂಬೈ ವಲಯದ ಕಾಂಗ್ರೆಸ್ ನ ಕಾರ್ಯದರ್ಶಿ ಜಯಪ್ರಕಾಶ್ ಆರ್ ಶೆಟ್ಟಿ ಮಾತುಕತೆಯಲ್ಲಿ ಭಾಗವಹಿಸಿದರು.
ಈ ವೇಳೆ ಹಲವು ಕಾಂಗ್ರೆಸ್ ಪ್ರಮುಖರು ಉಪಸ್ಥಿತರಿದ್ದರು.


























