ವಿಟ್ಲ : ಭಾಲಾವಲೀಕಾರ್ /ರಾಜಾಪುರ ಸಾರಸ್ವತ ಸೇವಾ ಸಂಘ (ರಿ) ವಿಟ್ಲ ಇದರ 24ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಮಂಗಳ ಮಂಟಪ ಶ್ರೀರಾಮ ನಗರ ವಿಟ್ಲದಲ್ಲಿ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮಕ್ಕೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭಾಗವಹಿಸಿದರು.

ಶಶಿಧರ್ ನಾಯಕ್ ಶಾಲು ಹೊದಿಸಿ ಗೌರವಿಸಿದರು. ಮಹಾಪೂಜೆಯ ಬಳಿಕ ಪ್ರಸಾದ ಭೋಜನ ನಡೆಯಿತು. ಸುಮಾರು 400ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

