ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಯೋಜನೆಯ ಅನುದಾನ ತಲುಪುದ್ರಲ್ಲಿ ಹೇಮಾವತಿ ಹೆಗ್ಡೆಯವರ ವಾತ್ಸಲ್ಯ ಯೋಜನೆಯು ಸಹಕಾರಿಯಾಗಿದೆ ಎಂದು ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ರವರು ಹೇಳಿದರು.

ಅವರು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ದಾಸಕೋಡಿ ನೆಲ್ಲಿ ಎಂಬಲ್ಲಿ ಗೀತಾ ರವೀಂದ್ರ ಪೂಜಾರಿ ಯವರಿಗೆ ವಾತ್ಸಲ್ಯ ಮನೆಯ ಬೀಗದ ಕಿ ಹಾಗೂ ಧರ್ಮಸ್ಥಳದ ಪ್ರಸಾದ ರೂಪವಾಗಿ ಮಂಜುನಾಥ ಸ್ವಾಮಿಯ ಭಾವಚಿತ್ರವನ್ನು ಹಸ್ತತರಿಸಿ ಮಾತನಾಡಿದರು.
ಗೀತಾ ರವೀಂದ್ರ ಪೂಜಾರಿ ಅವರು ತಾಯಿ ಮತ್ತು ತಮ್ಮನೊಂದಿಗೆ ಕಡು ಬಡತನದ ಕುಟುಂಬ ಜೀವನ ಸಾಗಿಸುತ್ತಿದ್ದರು. ತಾಯಿ ಮತ್ತು ತಮ್ಮ ತೀರಿಕೊಂಡ ನಂತರ ಮನೆಯ ದುರವಸ್ತಿಯಿಂದ ಈ ಮನೆಯಲ್ಲಿ ವಾಸವಿರದೆ ತನ್ನ ಇಬ್ಬರು ಚಿಕ್ಕಮಕ್ಕಳೊಂದಿಗೆ ಹಲವಾರು ವರುಷ ಬಾಡಿಗೆ ಮನೆಯಲ್ಲಿ ದಿನ ಕಳೆಯುತ್ತಿದ್ದರು ಹೀಗಿರುವಾಗ ಈ ಬಗ್ಗೆ ತನ್ನ ಕಷ್ಟ ಜೀವನದ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ಸಹಾಯ ಹಸ್ತದ ಮನವಿಯನ್ನು ಸಲ್ಲಿಸಿದರು.

ಇವರ ಕಷ್ಟದ ಜೀವನವನ್ನು ಅರಿತ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರು ವಾತ್ಸಲ್ಯ ಮನೆ ನಿರ್ಮಾಣ ಯೋಜನೆಯಡಿಯಲ್ಲಿ ಮನೆ ರಿಪೇರಿಯ ಅನುದಾನ ಬಿಡುಗಡೆಗೊಳಿಸಿದರು.
ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ, ಕಲ್ಲಡ್ಕ ವಲಯ ಮೇಲ್ವಿಚಾರಕರಾದ ಸುಗುಣಶೆಟ್ಟಿ, ಸೇವ ಪ್ರತಿನಿಧಿ ವಿದ್ಯಾ, ಗಣೇಶ್ ವಲಯಾಧ್ಯಕ್ಷರಾದ ತುಳಸಿ ಜ್ಞಾನವಿಕಾಸ ವಿಟ್ಲ ಸಮನ್ವಯ ಧಿಕಾರಿ ವಿಜಯಲಕ್ಷ್ಮಿ, ವಲಯ ವಿಪತ್ತು ನಿರ್ವಹಣಾ ಶೌರ್ಯ ತಂಡದ ಮಾಧವ ಸಾಲಿಯಾನ್ ಇವರ ಮುತುವರ್ಜಿಯೊಂದಿಗೆ ಕಲ್ಲಡ್ಕ ವಲಯ ವಿಪತ್ತು ನಿರ್ವಹಣಾ ಶೌರ್ಯ ತಂಡವು ಪೆರ್ನೆ ಘಟಕದ ಸಹಕಾರದೊಂದಿಗೆ ಮನೆ ರಿಪೇರಿ ಕೆಲಸ ಕಾರ್ಯ ಪ್ರಾರಂಭಿಸಿದರು . ಅವಿರತ ಶ್ರಮದಾನದೊಂದಿಗೆ ಅವ್ಯವಸ್ಥೆಯಲ್ಲಿದ್ದ ಮನೆಯನ್ನು ವ್ಯವಸ್ಥಿತವಾಗಿ ರೂಪುಗೊಳಿಸಲಾಯಿತು.

ಸುಣ್ಣ ಬಣ್ಣ ಬಳಿದು ಅಂದ ಚಂದದೊಂದಿಗೆ ಹೊಸ ರೂಪದೊಂದಿಗೆ ವಾತ್ಸಲ್ಯ ಮನೆಯ ಗ್ರಹಪ್ರವೇಶ ಕಾರ್ಯದೊಂದಿಗೆ ಬಡ ಕುಟುಂಬಕ್ಕೆ ಹಸ್ತಾಂತರ ಕಾರ್ಯಕ್ರಮ ನೆರವೇರಿತು.
ಇಷ್ಟರ ತನಕ ಬಾಡಿಗೆ ಮನೆಯಲ್ಲಿ ಕಷ್ಟದ ಜೀವನ ನಡೆಸುತ್ತಿದ್ದ ಬಡ ಕುಟುಂಬ ತನ್ನ ಸ್ವಂತ ಮನೆಯಲ್ಲಿ ಜೀವನ ಸಾಗಿಸಲು ಸಹಕರಿಸಿದ ಸಂಬಂಧಪಟ್ಟ ಯೋಜನೆಯ ಎಲ್ಲರನ್ನೂ ಬಡ ಕುಟುಂಬ ಕೃತಜ್ಞತಾ ಭಾವದಿಂದ ಸ್ಮರಿಸಿದರು.

ಮನೆ ಹಸ್ತಾoತರ ಕಾರ್ಯಕ್ರಮದ ವೇದಿಕೆಯಲ್ಲಿ ಯೋಜನೆಯ ಪುತ್ತೂರು ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಯೋಜನಾಧಿಕಾರಿ ಚೆನ್ನಪ್ಪ ಗೌಡ, ಜನಜಾಗೃತಿ ವೇದಿಕೆ ಕಲ್ಲಡ್ಕ ವಲಯ ಅಧ್ಯಕ್ಷ ಭಟ್ಯಪ್ಪ ಶೆಟ್ಟಿ, ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ, ಶೌರ್ಯ ವಿಪತ್ತು ತಂಡದ ಅಧ್ಯಕ್ಷ ಮಾಧವ ಸಾಲಿಯಾನ್, ಪುತ್ತೂರು ಜನ ಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ಸದಾನಂದ, ಮಾಣಿ ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ಮೊದಲಾದವರು ಉಪಸ್ಥಿತರಿದ್ದರು.

ಯೋಜನಾಧಿಕಾರಿ ಚೆನ್ನಪ್ಪ ಗೌಡ ಸ್ವಾಗತಿಸಿ,ಜ್ಞಾನವಿಕಾಸ ವಿಟ್ಲ ಸಮನ್ವಯ ಧಿಕಾರಿ ವಿಜಯಲಕ್ಷ್ಮಿ ವಂದಿಸಿದರು. ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶೌರ್ಯ ವಿಪತ್ತು ತಂಡದ ಸದಸ್ಯರುಗಳು, ಕಲ್ಲಡ್ಕ ವಲಯ ವ್ಯಾಪ್ತಿಯ ಸೇವಾ ಪ್ರತಿನಿಧಿಗಳು, ಯೋಜನೆಯ ಸದಸ್ಯರುಗಳು ಭಾಗವಹಿಸಿದ್ದರು.




























