ಪುತ್ತೂರು: ಕೋವಿಡ್ -19 ಜನತಾ ಕರ್ಫ್ಯೂ ಮಧ್ಯೆ ದಾರಿ ತಪ್ಪಿದ ಅಶಕ್ತ ಮಹಿಳೆಯನ್ನು ಅವರ ಮನೆಗೆ ಸುರಕ್ಷಿತವಾಗಿ ಸೇರಿಸುವ ಮೂಲಕ ನಗರಸಭೆ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ. ಕೋವಿಡ್-19ಗೆ ಸಂಬಂಧಿಸಿ ಸರಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಅಂಗಡಿಗಳಿಗೆ, ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸುವುದು ಮಾತ್ರ ನಮ್ಮ ಕೆಲಸವಲ್ಲ ಎಂದು ತೋರಿಸಿಕೊಟ್ಟ ಘಟನೆ ಮೇ.5ರಂದು ಬೆದ್ರಾಳದಲ್ಲಿ ನಡೆದಿದೆ.
ಕರ್ತವ್ಯ ನಿರತ ನಗರಸಭೆ ಅಧಿಕಾರಿಗಳು ವಾಹನದಲ್ಲಿ ಹೋಗುತ್ತಿದ್ದ ವೇಳೆ ಅಶಕ್ತ ಮಹಿಳೆಯೊಬ್ಬರು ಬೆದ್ರಾಳ ಸಮೀಪ ದಾರಿ ತಪ್ಪಿದ ಸ್ಥಿತಿಯಲ್ಲಿರುವುದು ಮಹಿಳೆಯೊಬ್ಬರ ಮೂಲಕ ತಿಳಿದು ಬಂದಂತೆ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ಮತ್ತು ಸಿಬ್ಬಂದಿಗಳು ಹಾಗೂ ಗೃಹ ರಕ್ಷಕದಳದ ಮಾರ್ಷಲ್‌ಗಳು ಅಶಕ್ತ ಮಹಿಳೆಯ ಜೊತೆಗಿದ್ದ ಮಹಿಳೆಯ ಮೂಲಕ ಅಶಕ್ತ ಮಹಿಳೆಯ ಮನೆ ವಿಳಾಸ ತಿಳಿದು ಪುತ್ರಮೂಲೆ ನೆಕ್ಕರೆ ಮನೆಗೆ ಅಶಕ್ತ ಮಹಿಳೆಯನ್ನು ಸುರಕ್ಷಿತವಾಗಿ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಗರಭೆಯ ಅಧಿಕಾರಿಗಳ ಈ ಕೆಲಸಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.